LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಲ್ಲೂರು ಗ್ರಾ.ಪಂ.ನಲ್ಲಿ 70 ಲಕ್ಷ ರೂ. ಅವ್ಯವಹಾರ!

ತನಿಖೆಗೆ ದಿನ ನಿಗದಿಪಡಿಸಿ ಬಾರದ ಅಧಿಕಾರಿಗಳು! ಸಮಗ್ರ ತನಿಖೆಗೆ ಗ್ರಾಮಸ್ಥರ ಆಗ್ರಹ;

ಗುಬ್ಬಿ : ಕಲ್ಲೂರು ಗ್ರಾಮ ಪಂಚಾಯತಿ ವತಿಯಿಂದ ನೆಡೆದಿರುವ ಅಮೃತ ಸರೋವರ ಹಾಗೂ ಕರಿಬೇವಿನ ಸಸಿ ಕಾಮಗಾರಿಯಲ್ಲಿ ಸುಮಾರು 70ಲಕ್ಷ ರೂ. ಅವ್ಯವಹಾರ ನೆಡೆದಿದ್ದು ಇದರ ಸಮಗ್ರ ತನಿಖೆ ನೆಡೆಸುವಂತೆ ಗ್ರಾಮಸ್ಥ ಡಿ. ಮಂಜುನಾಥ್ ಆಗ್ರಹಿಸಿದರು.

ತಾಲೂಕಿನ ಕಲ್ಲೂರು ಗ್ರಾಮ ಪಂಚಾಯಿತಿ ಮುಂಭಾಗ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ ಕೇಂದ್ರ ಸರ್ಕಾರದ ಯೋಜನೆಯಾದ ಅಮೃತ ಸರೋವರ ಯೋಜನೆಯಡಿ ಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿನಂದಿ ಗ್ರಾಮದ ಸ. ನಂ.62 ಮತ್ತು 65 ರ ಜಮೀನಿನಲ್ಲಿ ಈ ಕಾಮಗಾರಿ ನೆಡೆದಿದ್ದು ಸುಮಾರು 40 ಲಕ್ಷ ಹಣ ಅವ್ಯವಹಾರ ನಡೆದಿದ್ದು ಕಾಮಗಾರಿ ಸಂಪೂರ್ಣ ಕಳಪೆ ಯಾಗಿದೆ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಲ್ಲಿ ಸುಮಾರು 32  ಸಾವಿರ ಕರಿಬೇವಿನ ಸಸಿ ಹಾಕಿದ್ದು ಅದರಲ್ಲಿ ಸುಮಾರು 32 ಲಕ್ಷ ಹಣ ದುರುಪಯೋಗವಾಗಿದೆ. ಇದರ ಸಂಬಂಧ ಪಟ್ಟಂತೆ ತನಿಖೆ ನೆಡೆಸುವಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿಯೋಜನೆಯ ಜಿಲ್ಲಾ ಓಂಬಡ್ಸ್ ಪರ್ಸನ್ ಅವರಿಗೆ ನಾನು ದೂರು ಸಲ್ಲಿಸಿದ್ದು ಇಂದು ನರೇಗಾ ಯೋಜನೆಗೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಾಹಿಸುವ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಂತ್ರಿಕ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನೆಡೆಸಲು ದಿನಾಂಕ ನಿಗದಿ ಪಡಿಸಿ ಇಂದು ಉದ್ದೇಶ ಪೂರ್ವಕ ವಾಗಿ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ.
ಎಲ್ಲಾ ಅಧಿಕಾರಿಗಳು ವಿನಾಕಾರಣ ನೇಪಹೇಳಿ ಕೊಂಡು ಸ್ಥಳಕ್ಕೆ ಬರದೆ ನಿರ್ಲಕ್ಷ ವಹಿಸಿದ್ದಾರೆ. ಕರೆ ಮಾಡಿದರೆ ಪಿಡಿಒ ಸಂಪರ್ಕ ಕ್ಕೆ ಸಿಗುತ್ತಿಲ್ಲ. ಒಂಬಡ್ಸ್ ಪರ್ಸನ್, ಕಾರ್ಯನಿರ್ವಾಹಕ ಅಧಿಕಾರಿಗಳು ಕ್ಕೆ ಸಿಗುತ್ತಿಲ್ಲ ಇದರ ಹಿಂದೆ ದೊಡ್ಡ ಅವ್ಯವಹಾರ ನೆಡೆದಿರುವುದು ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ.

ಮೊದಲು ಅಧಿಕಾರಿಗಳು ಕಳ್ಳಾಟಬಿಟ್ಟು ನರೇಗಾ ಯೋಜನೆಯಡಿ ನೆಡೆದಿರುವ ಅವ್ಯವಹಾರದ ಬಗ್ಗೆ ಸಂಪೂರ್ಣ ತನಿಖೆ ನೆಡೆಸಬೇಕು ಇಲ್ಲಾವಾದರೆ ಸರ್ಕಾರದ ಮಟ್ಟದ ಉನ್ನತ ಮಟ್ಟದ ತನಿಖೆ ನೆಡೆಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನೆಡೆಸಿ ಈ ಅವ್ಯವಹಾರದಲ್ಲಿ ಶಾಮೀಲಾಗಿರುವ ಪಂಚಾಯಿತಿ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ವಹಿಸುವಂತೆ ಆಗ್ರಹಿಸಿದರು.

news_1791975823_0_212.webp

ಸ್ಥಳೀಯ ಯುವಕ ನಿತೀನ್ ಮಾತನಾಡಿ ಗ್ರಾಮ ಪಂಚಾಯಿತಿಗೆ ಸರಿಯಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬರುವುದಿಲ್ಲ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ ನಾವು ಯಾರ ಬಳಿ ನಮ್ಮ ಸಮಸ್ಯೆ ಹೇಳಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಮುಖಂಡ ಶಾಂತರಾಜು ಮಾತನಾಡಿ ಗ್ರಾಮ ಪಂಚಾಯತಿಯಲ್ಲಿ ಪರಿಶಿಷ್ಟ ಹಣ ದುರುಪಯೋಗವಾಗುತ್ತಿದೆ ಪರಿಶಿಷ್ಟ ಅಭಿವೃದ್ಧಿಗೆ ಹಣ ಬಳಸದೆ ಗ್ರಾಮ ಪಂಚಾಯಿತಿ ಅವರ ಮನಸೋ. ಇಚ್ಚೆ ಬಳಕೆ ಮಾಡುತ್ತಿದ್ದಾರೆ ಆರೋಪ ವ್ಯಕ್ತಪಡಿಸಿದರು.

ಈ ವೇಳೆಯಲ್ಲಿ ಸತೀಶ್. ಚಿದನಂದ್. ವಿಷ್ಣು.ಕಾರ್ತಿಕ್. ದರ್ಶನ್. ಶಿವು. ಇತರರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.2ರಿಂದ ಹೆಸರು ಕಾಳು ಖರೀದಿ ಕೇಂದ್ರ ಆರಂಭ!ವಿದ್ಯಾರ್ಥಿಗಳೊಂದಿಗೆ ಸಚಿವೆ ಶೋಭಾ ಕರಂದ್ಲಾಜೆ ಸಂವಾದಪಾವಗಡದಲ್ಲಿ ಬರ ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ಪರ್ಯಾಯ ವ್ಯವಸ್ಥೆ ಮಾಡದೆ ತುಮಕೂರಿನ ಹೆದ್ದಾರಿ ಬಂದ್ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ವಿಸಾಕಾ ಕಾರ್ಖಾನೆ ಮುಂದೆ ಬೃಹತ್‌ ಪ್ರತಿಭಟನೆ- Video ನೋಡಿಮೂಲಸೌಕರ್ಯ ಒದಗಿಸಲು ಆಗ್ರಹಿಸಿ ವಸತಿ ಶಾಲಾ ಮಕ್ಕಳ ಪ್ರತಿಭಟನೆಪಾವಗಡದಲ್ಲಿ ಟವರ್‌ ಹತ್ತಿ ಯುವತಿ ಆತ್ಮಹತ್ಯೆಗೆ ಯತ್ನ!ʼಕಲಬೆರಕೆ ರಹಿತ ಪೌಷ್ಠಿಕ ಆಹಾರ ಹಾಗೂ ಕಲಬೆರಕೆ ರಹಿತ ಔಷಧ ದೊರೆಯುವಂತಾಗಬೇಕುʼ- ಮುರಳೀಧರ ಹಾಲಪ್ಪಕೃಷಿ ಹೊಂಡಕ್ಕೆ ಬಿದ್ದ ಪತ್ನಿ ರಕ್ಷಿಸಲು ಹೋದ ಪತಿ; ಇಬ್ಬರೂ ನೀರುಪಾಲು!'ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ': ಸಿಪಿಐ ಮುಖಂಡ ಗಿರೀಶ್