LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪಾವಗಡದಲ್ಲಿ ಟವರ್‌ ಹತ್ತಿ ಯುವತಿ ಆತ್ಮಹತ್ಯೆಗೆ ಯತ್ನ!

ಪಾವಗಡ: ಟವರ್ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಸಿದ  ಯುವತಿಯನ್ನು ಕೊನೆಗೂ ಆಗ್ನಿ ಶಾಮಕದಳದ ಸಿಬ್ಬಂದಿ ಮತ್ತು ಪೋಲಿಸರು ಮನವೊಲಿಸಿ ಪಾರು  ಮಾಡಿದ ಘಟನೆ ಪಟ್ಣದ ಬಳ್ಳಾರಿ  ರಸ್ತೆಯ ಮಾರ್ಗದ  ಕೃಷಿಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬುಧವಾರ ಜರುಗಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಬಿ.ಎಸ್.ಎನ್.ಎಲ್. ಟವರ್ ಹತ್ತಿ  ಹೈ ಡ್ರಾಮ ನಡೆಸಿದ ಯುವತಿಯನ್ನು ಅಂದ್ರದ ಮೂಲದ  ಸದ್ಯ ಬೆಂಗಳೂರಿನ ವಾಸಿ ಎಂದು ಗುರ್ತಿಸಲಾಗಿದೆ.  ಈ ವಿಷಯ ಕಾಡ್ಗಿಚ್ಚಿನಂತೆ ಹರಡಿ ನೂರಾರು ಸಾರ್ವಜನಿಕರು ಸ್ಳಳದಲ್ಲಿ ಜಮಾಯಿಸಿದ್ದರು, 

ಈ ವೇಳೆ  ಯುವತಿ ಮಾದ್ಯಮದವರ ಜೊತೆ ಮಾತನಾಡಿ, ಪೋಲೀಸರು ನನಗೆ ನ್ಯಾಯಕೊಡಿಸಿಲ್ಲಾ ಎಂದು ಅರೋಪಿಸಿ ಪೋಲಿಸರ ವಿರುದ್ದ   ಗಂಭೀರ ಅರೋಪ ಮಾಡಿದ್ದಾಳೆ. ಅಂದ್ರದ ಕನಗಾನಹಳ್ಳಿಯ ಈ ಯುವತಿ ಮತ್ತು ಪಾವಗಡ ತಾಲ್ಲೂಕು ದೊಡ್ಡೇನಹಳ್ಳಿ ಗ್ರಾಮದ  ಗಣೇಶ್ ಎಂಬುವರು  ಇತ್ತಿಚೆಗೆ ಪ್ರೀತಿಸಿ ಮದುವೆಯಾಗಿದ್ದು, ನಂತರ ಗಣೇಶ್ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದು, ಈ ಬಗ್ಗೆ ಈಕೆ ಬೆಂಗಳೂರಿನ ಮಾದನಾಯ್ಕನಹಳ್ಳಿ ಪೋಲೀಸ್ ಠಾಣೆಗೆ ದೂರು ಸಲ್ಲಿಸಿದ್ದಳು. ಅದರೆ ಪೋಲಿಸರು ಈ ಬಗ್ಗೆ ಗಣೇಶನನ್ನು ಪತ್ತೆ ಮಾಡಲಿಲ್ಲಾ,  ಇದರಿಂದ ಬೇಸತ್ತು,  ನನಗೆ ನ್ಯಾಯ ಸಿಕ್ಕಿಲ್ಲಾ ಎಂದು ಅರೋಪಿಸಿ ಬುದವಾರ ಪಟ್ಟಣದಲ್ಲಿ ಟವರ್ ಹತ್ತಿ  ಹೈ ಡ್ರಾಮ ಮಾಡಿದ್ದಾಳೆ.

ಕೊನೆಗೆ ಆಗ್ನಿ ಶಾಮಕ  ಪ್ರಭಾರ  ಠಾಣಾಧಿಕಾರಿ ವೆಂಕಟೇಶ್‌ನಾಡಗೌಡ, ಶಶಿಧರ್ ಕೆ.ಎಂ. ನಾಗೇಶ್ ಹನುಮಂತ ಜೂಲಗುಡ್ಡ, ದರ್ಶನ್‌ಕುಮಾರ್, ಈಶ್ವರ್ ನಾಯ್ಕ, ಹರೀಶ್ ಎನ್.ಎಂ.ಸ್ವರೂಪಕಮತಿ, ಶೇಖ್ ಮನ್ಸೂರ್ ಅಹಮದ್ ಮತ್ತು  ಪಾವಗಡ  ಪೋಲಿಸ್ ಠಾಣಾ ಸಿ.ಪಿ.ಐ. ಸುರೇಶ್,  ಪಿ.ಎಸ್.ಐ. ಶಿವಪ್ಪ, ಪೇದೆಗಳಾದ  ದೀಪಕ್,  ವೆಂಕಟೇಶ್ ನಾಯ್ಕ, ಸ್ಥಳಕ್ಕಾಗಮಿಸಿ ಯುವತಿ ಮನವೋಲಿಸಿ ಟವರ್ ನಿಂದ ಕೆಳಗಿಳಿಸಿ,  ಸಿಆಕೆಯ ಗಂಡ ಗಣೇಶನ ಊರು ದೊಡ್ಡೇನಹಳ್ಳಿ ಗ್ರಾಮ ಅರಸೀಕರೆ ಪೋಲೀಸ್  ಠಾಣಾ ವ್ಯಾಪ್ತಿಗೆ  ಒಳಪಡುವುದರಿಂದ ಆಕೆಯನ್ನು  ಪೋಲೀಸ್ ಜೀಪ್ನಲ್ಲಿ ತಾಲ್ಲೂಕಿನ  ಅರಸೀಕೆರೆ ಪೋಲೀಸ್ ಠಾಣೆಗೆ ಕರೆದೊಯ್ಯಲಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾವಗಡದಲ್ಲಿ ಬರ ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ಪರ್ಯಾಯ ವ್ಯವಸ್ಥೆ ಮಾಡದೆ ತುಮಕೂರಿನ ಹೆದ್ದಾರಿ ಬಂದ್ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ವಿಸಾಕಾ ಕಾರ್ಖಾನೆ ಮುಂದೆ ಬೃಹತ್‌ ಪ್ರತಿಭಟನೆ- Video ನೋಡಿಮೂಲಸೌಕರ್ಯ ಒದಗಿಸಲು ಆಗ್ರಹಿಸಿ ವಸತಿ ಶಾಲಾ ಮಕ್ಕಳ ಪ್ರತಿಭಟನೆಪಾವಗಡದಲ್ಲಿ ಟವರ್‌ ಹತ್ತಿ ಯುವತಿ ಆತ್ಮಹತ್ಯೆಗೆ ಯತ್ನ!ʼಕಲಬೆರಕೆ ರಹಿತ ಪೌಷ್ಠಿಕ ಆಹಾರ ಹಾಗೂ ಕಲಬೆರಕೆ ರಹಿತ ಔಷಧ ದೊರೆಯುವಂತಾಗಬೇಕುʼ- ಮುರಳೀಧರ ಹಾಲಪ್ಪಕೃಷಿ ಹೊಂಡಕ್ಕೆ ಬಿದ್ದ ಪತ್ನಿ ರಕ್ಷಿಸಲು ಹೋದ ಪತಿ; ಇಬ್ಬರೂ ನೀರುಪಾಲು!'ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ': ಸಿಪಿಐ ಮುಖಂಡ ಗಿರೀಶ್35ರಲ್ಲಿ 26 ಕಾಂಗ್ರೆಸ್ ಶಾಸಕರಿದ್ದರೂ ಸೋಲು ವಿಪರ್ಯಾಸ...!ಬ್ರೇಕಿಂಗ್: ಕಾರ್ಖಾನೆಯ ಮೆಷಿನ್‍ಗೆ ಸಿಕ್ಕಿ ಗುತ್ತಿಗೆ ಕಾರ್ಮಿಕ ಸಾ*ವು!?