LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

'ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ': ಸಿಪಿಐ ಮುಖಂಡ ಗಿರೀಶ್

ಬಿಎಸ್‌ಎನ್‌ಎಲ್ ಕಛೇರಿ ಎದುರು ಮಾನವ ಸರಪಳಿ ರಚಿಸಿ ಪ್ರತಿಭಟನೆ

ತುಮಕೂರು: ಕೇಂದ್ರ ಸರ್ಕಾರ ಕೂಡಲೇ ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಜಾಗೊಳಿಸಿ ಮತ್ತು ಎಸ್‌ಐಆರ್ ರದ್ದುಗೊಳಿಸಿ, ಮತಪತ್ರವನ್ನು ಜಾರಿಗೆ ತರುವ ಮೂಲಕ ಚುನಾವಣೆ ನಡೆಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಅವರು ಸಿಪಿಐ ನಿಂದ ಬಿಎಸ್‌ಎನ್‌ಎಲ್ ಕಛೇರಿ ಎದುರು ಪ್ರತಿಭಟನೆ ನಡೆಸಿ ಮಾನವಸರಪಣಿ ನಡೆಸಿ ಮಾತನಾಡಿದರು. ಕೇಂದ್ರ ಸರ್ಕಾರ ೨೦೨೩ರಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ತಿದ್ದುಪಡಿ ಮಾಡುವುದರ ಮೂಲಕ ಗ್ಯಾನೇಶ್ ಕುಮಾರನನ್ನು ರಕ್ಷಿಸುತ್ತಿದೆ. ಗ್ಯಾನೇಶ್ ಕುಮಾರ್ ಬಿಜೆಪಿಯ ಮತ್ತು ಆರ್‌ಎಸ್‌ಎಸ್ ಏಜೆಂಟ್ ಆಗಿ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಬಿಜೆಪಿಯು ಚುನಾವಣೆಗಳಲ್ಲಿ ಗೆಲ್ಲುವಂತೆ ನೋಡಿಕೊಳ್ಳುತ್ತಿದ್ದಾರೆ. ಮೂರು ಜನ ಆಯುಕ್ತರಲ್ಲಿ ಬಹುಮತದ ತೀರ್ಮಾನವನ್ನು ಜಾರಿ ಮಾಡಬೇಕು ಬದಲಾಗಿ ಫಾರಂ ೭ ಮತ್ತು ಫಾರಂ ೬ ಬದಲಾವಣೆಯಲ್ಲಿ ಇಬ್ಬರು ಆಯುಕ್ತರು ವಿರೋಧ ವ್ಯಕ್ತಪಡಿಸಿದರು ಸಹ ಫಾರಂ ೬ ಗೆ ಸುಪ್ರೀಂಕೋರ್ಟ್ ಸಹಮತ ಸೂಚಿಸಿದೆ ಎಂದು ಸುಳ್ಳು ಹೇಳಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಲಕ್ಷಾಂತರ ನೈಜ ಮತದಾರರನ್ನು ಹೊರಗಿಟ್ಟು, ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿ ನಡೆದುಕೊಂಡಿದ್ದಾರೆ ಎಂದರು.

ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿ ಪಶ್ಚಿಮ ಬಂಗಾಳದಲ್ಲಿ ೧೬ ಲಕ್ಷ ನೈಜ ಮತದಾರರನ್ನು ಕೈಬಿಟ್ಟಿರುವುದು ತಪ್ಪಾಗಿದೆ ಎಂದು ತಿಳಿಸಿದೆ. ಇದರಿಂದ ಗ್ಯಾನೇಶ್ ಕುಮಾರ್ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಸಾಬಿತಾಗಿದೆ ಮತ್ತು ಸುಪ್ರೀಂಕೋಟ್ ಫಾರಂ-೦೬ ತಿದ್ದುಪಡಿಗೆ ಯಾವುದೇ ಸಲಹೆಯನ್ನು ನೀಡಿಲ್ಲವೆಂದು ತಿಳಿಸಿದೆ ಹಾಗಾಗಿ ಗ್ಯಾನೇಶ್ ಕುಮಾರ್‌ರವರನ್ನು ವಜಾಗೊಳಿಸಿ ತನಿಖೆಗೆ ಒಳಪಡಿಸಬೇಕು ಎಂದರು.

ಸಿಪಿಐ ಜಿಲ್ಲಾ ಖಜಾಂಚಿ ಅಶ್ವತ್ಥನಾರಾಯಣ ಮಾತನಾಡಿ ಚುನಾವಣೆಗಳಲ್ಲಿ ಅಕ್ರಮ ನಡೆಸುವ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಜನಸಾಮಾನ್ಯರನ್ನು ನಿರಂತರವಾಗಿ ಕಾಡುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್‌ಟಿ ಹೆಚ್ಚಳ, ನಿರುದ್ಯೋಗ ಸಮಸ್ಯೆ, ನೀಟ್ ಪ್ರಶ್ನೆಪತ್ರಿಕೆ ಸೂರಿಕೆಯಂತಹ ಘಟನೆಗಳನ್ನು ಮರೆಮಾಚಲು ಸಂವಿಧಾನ ವಿರೋಧಿ ಎಸ್‌ಐಆರ್ ಮೂಲಕ ಶಾಶ್ವತವಾಗಿ ಅಧಿಕಾರದಲ್ಲಿ ಮುಂದುವರೆಯಲು ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಂಡಿದ್ದು  ಗ್ಯಾನೇಶ್ ಕುಮಾರ್ ಸೇರಿದಂತೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರನ್ನು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಟಿ.ಎನ್. ರಾಜೇಶ್ ಮತ್ತು ಬೋಜರಾಜು, ಜಿಲ್ಲಾ ಮಂಡಳಿ ಸದಸ್ಯ ನಾಗರಾಜು,  ಶಾಖಾ ಕಾರ್ಯದರ್ಶಿಗಳಾದ ಹನುಮಯ್ಯ, ದೇವರಾಜು, ಮಂಜುನಾಥ್, ಜಿಲ್ಲಾ ಮುಖಂಡರಾದ ವೆಂಕಟೇಶ್, ಗೋಪಾಲ್ ಕುಪ್ಪೂರು, ಚಾಮುಂಡಿ ಡೈಕ್ಯಾಸ್ಟ್ ಯೂನಿಯನ್‌ನ ಅಧ್ಯಕ್ಷರಾದ ನಾಗಭೂಷಣ್, ಉಪಾಧ್ಯಕ್ಷರಾದ ರಮೇಶ್, ಪಿಜೆಮಾರ್ಗೋ ಕಿಶೋರ್, ಕೆಎಸ್‌ಆರ್‌ಟಿಸಿ ಮುಖಂಡರಾದ ಮನ್ಮಥ, ಮಂಜುನಾಥ್ ಇನ್ನೂ ಮುಂತಾದವರು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾವಗಡದಲ್ಲಿ ಬರ ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ಪರ್ಯಾಯ ವ್ಯವಸ್ಥೆ ಮಾಡದೆ ತುಮಕೂರಿನ ಹೆದ್ದಾರಿ ಬಂದ್ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ವಿಸಾಕಾ ಕಾರ್ಖಾನೆ ಮುಂದೆ ಬೃಹತ್‌ ಪ್ರತಿಭಟನೆ- Video ನೋಡಿಮೂಲಸೌಕರ್ಯ ಒದಗಿಸಲು ಆಗ್ರಹಿಸಿ ವಸತಿ ಶಾಲಾ ಮಕ್ಕಳ ಪ್ರತಿಭಟನೆಪಾವಗಡದಲ್ಲಿ ಟವರ್‌ ಹತ್ತಿ ಯುವತಿ ಆತ್ಮಹತ್ಯೆಗೆ ಯತ್ನ!ʼಕಲಬೆರಕೆ ರಹಿತ ಪೌಷ್ಠಿಕ ಆಹಾರ ಹಾಗೂ ಕಲಬೆರಕೆ ರಹಿತ ಔಷಧ ದೊರೆಯುವಂತಾಗಬೇಕುʼ- ಮುರಳೀಧರ ಹಾಲಪ್ಪಕೃಷಿ ಹೊಂಡಕ್ಕೆ ಬಿದ್ದ ಪತ್ನಿ ರಕ್ಷಿಸಲು ಹೋದ ಪತಿ; ಇಬ್ಬರೂ ನೀರುಪಾಲು!'ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ': ಸಿಪಿಐ ಮುಖಂಡ ಗಿರೀಶ್35ರಲ್ಲಿ 26 ಕಾಂಗ್ರೆಸ್ ಶಾಸಕರಿದ್ದರೂ ಸೋಲು ವಿಪರ್ಯಾಸ...!ಬ್ರೇಕಿಂಗ್: ಕಾರ್ಖಾನೆಯ ಮೆಷಿನ್‍ಗೆ ಸಿಕ್ಕಿ ಗುತ್ತಿಗೆ ಕಾರ್ಮಿಕ ಸಾ*ವು!?