ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಬಸ್ ನಿಲ್ದಾಣದ ಆವರಣದಲ್ಲಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ,ಸಿಹಿ ಹಂಚಿ,ಪಟಾಕಿ ಸಿಡಿಸುವ ಮೂಲಕ ವಾಲ್ಮೀಕಿ ಜಯಂತಿಯನ್ನು ಜಾತಿ, ಮತ, ಧರ್ಮ ಎನ್ನದೆ ಸರ್ವ ಸಮುದಾಯದ ಮುಖಂಡರು ಸೇರಿ ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಇಡೀ ಮಾನವ ಕುಲಕ್ಕೆ ದಾರಿದೀಪವಾಗಿದೆ. ಅವರ ತ್ಯಾಗ, ತಪಸ್ಸು ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದರು.
ನಂತರ ಮಾತನಾಡಿದ ಮುಖಂಡರಾದ ಕವಿತಾ ನರಸಪ್ಪ ಅವರು, ವಾಲ್ಮೀಕಿ ಮಹರ್ಷಿಗಳ ಜೀವನ, ಅವರ ಆದರ್ಶಗಳು ಮತ್ತು ಅವರು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಬೆಳಕು ಚೆಲ್ಲಿದರು. ವಾಲ್ಮೀಕಿ ಅವರು ತೋರಿದ ಸಮಾನತೆಯ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಿಡಿಒ ಸಿದ್ದರಾಮಯ್ಯ, ಮಾದಣ್ಣ,ರಂಗಶಾಮಯ್ಯ ಓಬಳೇಶ್, ಮೂರ್ತಿ ದೊಡ್ಡಮನೆ, ರಂಗಯ್ಯ,ಜಯರಾಜ್, ಮುದ್ದರಂಗಯ್ಯ, ಶಿವರಾಜ್, ಹನುಮಂತಯ್ಯ,ಗೋಪಿ, ನಾಗರಾಜ್, ರಾಜಣ್ಣ, ವಿನೋದ್ ಕುಮಾರ್,ರಾಮಂಜಿ ಸತೀಶ್, ರಮೇಶ್ ರಾಜೇಶ್, ಮರುಡಪ್ಪ , ರೇಣುಕಾ ಪ್ರಸಾದ್, ಸೇರಿದಂತೆ
ಗ್ರಾಮದ ವಿವಿಧ ಸಮುದಾಯಗಳ ಮುಖಂಡರು, ಯುವಕರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.