LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದಯಾಮರಣ ಕೋರಿ ನೂರಾರು ರೈತರ ಅರ್ಜಿ!

"ಅಧಿಕಾರಿಗಳ ದ್ವಂದ್ವ ನಿಲುವು, ಜಮೀನು ಕೈಬಿಟ್ಟು ಹೋಗುವ ಆತಂಕದಲ್ಲಿ ಅನ್ನದಾತ"

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

ತುರುವೇಕೆರೆ: ತಾಲ್ಲೂಕು ಕಂದಾಯ ಇಲಾಖಾ ಅಧಿಕಾರಿಗಳ ದ್ವಂದ್ವ ನಿಲುವಿನಿಂದ ಕುಟುಂಬದ ನಿರ್ವಹಣೆಗೆ ಆಧಾರವಾಗಿರುವ ಜಮೀನು ಕಳೆದುಕೊಳ್ಳುವ ಆತಂಕದಲ್ಲಿರುವ ಮಾಯಸಂದ್ರ ಹೋಬಳಿಯ ಹತ್ತಾರು ಗ್ರಾಮಗಳ ರೈತರು, ಮಹಿಳೆಯರು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದರು.

ತಾಲ್ಲೂಕು ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ನೂರಾರು ರೈತರು, ಮಹಿಳೆಯರು ನಮ್ಮ ಜಮೀನು ನಮಗೆ ನೀಡಿ, ಇಲ್ಲವೇ ದಯಾಮರಣ ಕೊಡಿ ಎಂದು ಆಕ್ರೋಶ ಹೊರಹಾಕಿದರು.

ತಾಲ್ಲೂಕಿನ ಮಾಯಸಂದ್ರ ಹೋಬಳಿಯ ದೊಡ್ಡಬೀರನಕೆರೆ ಸರ್ವೆ ನಂಬರ್ 101, 104, 107, 108ರ  ಜಮೀನಿನಲ್ಲಿ ದೊಡ್ಡ ಢಣನಾಯಕನಪುರ, ಡಿ.ಬಿ.ಹಟ್ಟಿ, ದೊಡ್ಡ ಬೀರನಕೆರೆ, ರಮಾನಂದ ನಗರ(ವಡ್ಡರಹಟ್ಟಿ) ಗ್ರಾಮಗಳ ರೈತರು ಹಲವಾರು ವರ್ಷಗಳಿಂದ 50, 53, 57 ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಟಿಟಿ ಪಾವತಿಸಿ ಸಾಗುವಳಿ ಮಾಡುತ್ತಿದ್ದು, ಈ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ಖಾಸಗಿ ವ್ಯಕ್ತಿಗಳು ನೀಡಿದ ದೂರಿನ ಮೇಲೆ ಅಧಿಕಾರಿಗಳು ಪರಿಶೀಲನೆ ನಡೆಸದೆ ಸಾಗುವಳಿ ಮಾಡುತ್ತಿರುವ ಜಮೀನುಗಳು ಅರಣ್ಯ ಇಲಾಖೆಗೆ ಸೇರಿದ್ದೆಂದು ಹೇಳಿ ಜಮೀನಿಗೆ ತೆರಳದಂತೆ ಟ್ರಂಚ್ ತೆಗೆಸುತ್ತಿದ್ದು ನಮಗೆ ಅನ್ಯಾಯವಾಗಿದೆ. ಖಾಸಗಿ ವ್ಯಕ್ತಿಗಳೊಂದಿಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಶಾಮೀಲಾಗಿ ನಮ್ಮನ್ನು ಜಮೀನಿನಿಂದ ಒಕ್ಕಲೆಬ್ಬಿಸುತ್ತಿದ್ದಾರೆ. ಜಮೀನು ಕಳೆದುಕೊಂಡರೆ ನಮ್ಮ ಕುಟುಂಬ ಬೀದಿಗೆ ಬೀಳುತ್ತದೆ, ಬದುಕು ದುಸ್ಥರವಾಗುತ್ತದೆ. ಇದರ ಬದಲು ಸಾಯುವುದೇ ಮೇಲು. ನಮ್ಮ ಜಮೀನು ನಮಗೆ ನೀಡಿ, ಇಲ್ಲವೇ ದಯಾಮರಣ ಕೊಡಿ ಎಂದು ರೈತರು, ಮಹಿಳೆಯರು ಶಿರಸ್ತೇದಾರ್ ಮೂಲಕ ರಾಷ್ಟ್ರಪತಿಗಳಿಗೆ ಅಹವಾಲು ಸಲ್ಲಿಸಿದರು.

ಸರ್ಕಾರದ ಯೋಜನೆಯನ್ವಯ ನಮೂನೆ 53 ಹಾಗೂ 57 ರಲ್ಲಿ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಇದರ ಆಧಾರದ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸರ್ವೆ ನಂಬರ್ 108 ರ ನಕ್ಷೆ ಸಿದ್ದಪಡಿಸಿಕೊಟ್ಟಿದ್ದು, ಈ ನಕ್ಷೆಗೆ ತಹಸೀಲ್ದಾರ್, ಕಂದಾಯ ನಿರೀಕ್ಷಕರು, ಸರ್ವೆಯರ್, ಗ್ರಾಮ ಆಡಳಿತಾಧಿಕಾರಿ ಎಲ್ಲರೂ ಸಹಿ ಹಾಕಿದ್ದಾರೆ ಎಂದು ದಾಖಲೆ ಪ್ರದರ್ಶಿಸಿದ ರೈತರು, ನಾವು ಹಲವಾರು ವರ್ಷದಿಂದ ಉಳುಮೆ ಮಾಡುತ್ತಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದರೆ ಇಲ್ಲಿಯವರೆಗೂ ಮೌನವಾಗಿದ್ದುದು ಏಕೆ? ನಕ್ಷೆ ಸಿದ್ದಪಡಿಸುವಾಗ ಜಮೀನು ಯಾವುದು ಎಂದು ಗೊತ್ತಿರಲಿಲ್ಲವೇ? 2026 ಅಕ್ಟೋಬರ್ 16 ರಂದು ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಸರ್ವೆ ನಡೆಸಿ ಜಮೀನು ಅರಣ್ಯ ಇಲಾಖೆಯದ್ದು ಎಂದು ಹೇಳಲು ಯಾವುದೇ ದಾಖಲೆ ಲಭ್ಯವಿಲ್ಲ ಎಂದು ಸರ್ಕಾರಕ್ಕೆ ವರದಿ ಕಳಿಸಿದ್ದಾರೆ. ಇದರ ಆಧಾರದಲ್ಲೇ ಪಹಣಿ ಇಂಡೀಕರಣ ಮಾಡಬಾರದೆಂದು ಅರಣ್ಯ ಇಲಾಖೆಗೆ ತಕಾರರು ಅರ್ಜಿ ಸಹ ಸಲ್ಲಿಸಿದ್ದೇವೆ. ಈಗ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ, ಅವರ ಒತ್ತಡಕ್ಕೆ ಮಣಿದು ರೈತರನ್ನು ಒಕ್ಕಲೆಬ್ಬಿಸಲು ಬಂದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ರೈತರು ಕಿಡಿಕಾರಿದರು.

ಈ ಬಗ್ಗೆ ಮಾತನಾಡಿದ ಕೃಷಿಕ ಸಮಾಜದ ನಿಕಟಪೂರ್ವ ಅಧ್ಯಕ್ಷ ಮಂಜುನಾಥಗೌಡ, ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿಗೆ ಕಂದಾಯ ಇಲಾಖೆಯೇ ಅಧಿಕೃತವಾಗಿ ಅಳತೆ ಮಾಡಿ ನಕ್ಷೆ ನೀಡಿದೆ, ಈಗ ಅರಣ್ಯ ಇಲಾಖೆ ಜಮೀನು ಎಂದು ಒಕ್ಕಲೆಬ್ಬಿಸಲು ಮುಂದಾಗಿರುವುದು ಸರಿಯಲ್ಲ. ಸಾಲಸೋಲ ಮಾಡಿ ಜಮೀನು ಅಭಿವೃದ್ದಿಪಡಿಸಿ ಕುಟುಂಬ ನಿರ್ವಹಣೆಗೆ ದಿಕ್ಕಾಗಿರುವ ಜಮೀನನ್ನೇ ಅರಣ್ಯ ಇಲಾಖೆ ಕಿತ್ತುಕೊಂಡರೆ ರೈತರು ಬದುಕುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.

ಜಂಟಿ ಸಭೆ ನಡೆಸುವಂತೆ ಒತ್ತಾಯ:_ ಕಂದಾಯ, ಅರಣ್ಯ ಇಲಾಖೆ ಹಾಗೂ ರೈತರು ಸೇರಿದಂತೆ ತಹಸೀಲ್ದಾರ್ ಅವರು ಜಂಟಿ ಸಭೆ ಕರೆಯಬೇಕು. ಫಲಾನುಭವಿ ರೈತರ ಅಹವಾಲುಗಳನ್ನು ಆಲಿಸಿ, ಕಾನೂನುಬದ್ಧವಾಗಿ ಅವರಿಗೆ ರೈತರಿಗೆ ಭೂಮಿಯ ಹಕ್ಕು ಕಲ್ಪಿಸಬೇಕು. ರೈತರ ಮೇಲೆ ದಬ್ಬಾಳಿಕೆ ನಡೆಸಿ ಒಕ್ಕಲೆಬ್ಬಿಸುವ ಕೆಲಸವನ್ನು ಅಧಿಕಾರಿಗಳು ನಿಲ್ಲಿಸಬೇಕು. ಸಭೆಯಲ್ಲಿ ಇಲಾಖೆಗಳೊಂದಿಗೆ ರೈತರು ನಡೆಸಿರುವ ಎಲ್ಲಾ ರೀತಿಯ ಪತ್ರ ವ್ಯವಹಾರ, ಅಗತ್ಯ ದಾಖಲೆಗಳನ್ನು ಪ್ರದರ್ಶಿಸಲಾಗುವುದು ಎಂದು ರೈತರು, ಮುಖಂಡರು ಆಗ್ರಹಿಸಿದರು.

ಪ್ರತಿಭಟನೆ ನಂತರ ರೈತರು, ಮಹಿಳೆಯರು ನಮ್ಮ ಜಮೀನು ನಮಗೆ ನೀಡಿ, ಇಲ್ಲವೇ ದಯಾಮರಣ ಕೊಡಿ ಎಂದು ಕೋರಿ ಶಿರಸ್ತೇದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡ ದಂ.ಕುಮಾರ್, ಗೋವಿಂದಬೋವಿ, ರವಿಕುಮಾರ್, ಧನಂಜಯ, ಲಲಿತ್ ಕುಮಾರ್, ಹನುಮಂತರಾಜು, ಶಿವಣ್ಣ, ಸುರೇಶ್, ಮೋಹನ್, ಗೀತಾ, ಶಿಲ್ಪಶ್ರೀ, ನಂದಿನಿ, ಮಂಜುಳಾ, ಸಾವಿತ್ರಮ್ಮ, ಪಾರ್ವತಮ್ಮ, ಚನ್ನಮ್ಮ, ಸರಸ್ವತಿ ಸೇರಿದಂತೆ ನೂರಾರು ರೈತರು, ಮಹಿಳೆಯರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.2ರಿಂದ ಹೆಸರು ಕಾಳು ಖರೀದಿ ಕೇಂದ್ರ ಆರಂಭ!ವಿದ್ಯಾರ್ಥಿಗಳೊಂದಿಗೆ ಸಚಿವೆ ಶೋಭಾ ಕರಂದ್ಲಾಜೆ ಸಂವಾದಪಾವಗಡದಲ್ಲಿ ಬರ ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ಪರ್ಯಾಯ ವ್ಯವಸ್ಥೆ ಮಾಡದೆ ತುಮಕೂರಿನ ಹೆದ್ದಾರಿ ಬಂದ್ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ವಿಸಾಕಾ ಕಾರ್ಖಾನೆ ಮುಂದೆ ಬೃಹತ್‌ ಪ್ರತಿಭಟನೆ- Video ನೋಡಿಮೂಲಸೌಕರ್ಯ ಒದಗಿಸಲು ಆಗ್ರಹಿಸಿ ವಸತಿ ಶಾಲಾ ಮಕ್ಕಳ ಪ್ರತಿಭಟನೆಪಾವಗಡದಲ್ಲಿ ಟವರ್‌ ಹತ್ತಿ ಯುವತಿ ಆತ್ಮಹತ್ಯೆಗೆ ಯತ್ನ!ʼಕಲಬೆರಕೆ ರಹಿತ ಪೌಷ್ಠಿಕ ಆಹಾರ ಹಾಗೂ ಕಲಬೆರಕೆ ರಹಿತ ಔಷಧ ದೊರೆಯುವಂತಾಗಬೇಕುʼ- ಮುರಳೀಧರ ಹಾಲಪ್ಪಕೃಷಿ ಹೊಂಡಕ್ಕೆ ಬಿದ್ದ ಪತ್ನಿ ರಕ್ಷಿಸಲು ಹೋದ ಪತಿ; ಇಬ್ಬರೂ ನೀರುಪಾಲು!'ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ': ಸಿಪಿಐ ಮುಖಂಡ ಗಿರೀಶ್