ತುಮಕೂರು ತಾಲ್ಲೂಕಿನ ಹರಳೂರಿನ ಅರುಣಕುಮಾರ್ ಆರ್. ಅವರಿಗೆ ಭೌತಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಗಿದೆ.
ತುಮಕೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಪ್ರೊ. ಜಿ. ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ಮತ್ತು ಭೌತಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಅಧ್ಯಕ್ಷರು ಮತ್ತು ವಿವಿಯ ಕುಲಪತಿಗಳಾದ ಪ್ರೊ. ಎಚ್. ನಾಗಭೂಷಣ ಅವರ ಸಹ-ಮಾರ್ಗದರ್ಶನದಲ್ಲಿ Synthesis of Rare Earth Doped Aluminates for Solid State Lighting and Advanced Forensic Applications ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಲಭಿಸಿದೆ.
ಅರುಣಕುಮಾರ್ ಅವರ ಈ ಸಾಧನೆಗೆ ವಿವಿಯ ಪ್ರಾಧ್ಯಾಪಕರು, ಸಂಶೋಧನಾ ಸಹೋದ್ಯೋಗಿಗಳು, ಕುಟುಂಬದವರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.