LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶಾಲಿನಿ ಶೆಟ್ಟಿ ಅವರಿಗೆ ʼಮುಂಜಾನೆ ಸನ್ಮಾನʼ

ಆಸ್ಟ್ರೇಲಿಯಾದಲ್ಲಿ ನಡೆದ ಹಿರಿಯರ ವಿಶ್ವ ಅಥ್ಲೇಟಿಕ್ ಕ್ರೀಡಾಕೂಟದ ಜಾವಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಹಿರಿಯ ಮಹಿಳಾ ಕ್ರೀಡಾಪಟು

ತುಮಕೂರು: ಇತ್ತೀಚಗೆ ಆಸ್ಟ್ರೇಲಿಯಾದಲ್ಲಿ ನಡೆದ ಹಿರಿಯರ ವಿಶ್ವ ಅಥ್ಲೇಟಿಕ್ ಕ್ರೀಡಾಕೂಟದ ಜಾವಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಹಿರಿಯ ಮಹಿಳಾ ಕ್ರೀಡಾಪಟು ಶಾಲಿನಿ ಶೆಟ್ಟಿ ಅವರನ್ನು ತುಮಕೂರಿನ ಮುಂಜಾನೆ ಗೆಳೆಯರ ಬಳಗದವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.

ದೆಸರಾ ರಾಜ್ಯಮಟ್ಟದ ಕ್ರೀಡಾಕೂಟದ ಅಂಗವಾಗಿ ಉಡುಪಿ ಜಿಲ್ಲಾ ತಂಡದ ವ್ಯವಸ್ಥಾಪಕರಾಗಿ ಆಗಮಿಸಿದ್ದ ಶಾಲಿನಿ ಶೆಟ್ಟಿಯವರನ್ನು ಮುಂಜಾನೆ ಗೆಳೆಯರ ಬಳಗದ ಸದಸ್ಯರುಗಳು, ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶಾಲು, ಹಾರ ಹಾಕಿ ಗೌರವಿಸಿದರು.

ಈ ವೇಳೆ ಮಾತನಾಡಿದ ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಶಾಲಿನಿ ಶೆಟ್ಟಿ ಮತ್ತು ನಾನು ಹಲವು ಹಿರಿಯರ ಕ್ರೀಡಾಕೂಟಗಳಲ್ಲಿ ಒಟ್ಟಿಗೆ ಭಾಗವಹಿಸಿದ್ದೇವೆ. ಅವರ ಕ್ರೀಡಾಸ್ಪೂರ್ತಿಗೆ ನಾನು ಮಾರು ಹೋಗಿದ್ದೇನೆ. ಅಂತಹವರು ಒಂದು ಜಿಲ್ಲಾ ತಂಡವನ್ನು ಮುನ್ನೆಡೆಸುತ್ತಿರುವುದು ಸಂತೋಷದ ವಿಚಾರ. ಈ ವಯಸ್ಸಿನಲ್ಲಿಯಲ್ಲಿಯೂ ಕಿರಿಯರೊಂದಿಗೆ ಸೇರಿ ತನ್ನ ಕ್ರೀಡಾ ಸ್ಪೂರ್ತಿಯನ್ನು ಮರೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅವರನ್ನು ಗೌರವಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.

ತುಮಕೂರು ನಗರವನ್ನು ಶೈಕ್ಷಣಿಕ ನಗರಿಯ ಜೊತೆಗೆ, ಕ್ರೀಡಾನಗರಿಯಾಗಿಯೂ ರೂಪಿಸಲು ಡಾ.ಜಿ.ಪರಮೇಶ್ವರ್ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.ಅವರಿಂದ ಅನೇಕ ಕ್ರೀಡಾ ಸೌಲಭ್ಯಗಳು ಜಿಲ್ಲೆಯ ಕ್ರೀಡಾಪಟುಗಳಿಗೆ ದೊರೆತಿದೆ.ಮಹಾತ್ಮಗಾಂಧಿ ಕ್ರೀಡಾಂಗಣ ಅಂತರರಾಷ್ಟಿçÃಯ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದರೆ ಅದಕ್ಕೆ ಡಾ.ಜಿ.ಪರಮೇಶ್ವರ್ ಕಾರಣ ಎಂದು ಟಿ.ಕೆ.ಆನಂದ್ ಪ್ರಶಂಶಿಸಿದರು.

ಕನ್ನಡಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ಮುಂಜಾನೆ ಗೆಳೆಯರ ಬಳಗ ಆರಂಭದಿAದಲೂ ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ. ರಾಜ್ಯ, ರಾಷ್ಟç ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ, ಪದಕ ಗಳಿಸಿದ ರಾಜ್ಯದ ಕ್ರೀಡಾಪಟುಗಳನ್ನು ಗುರುತಿಸಿ, ಅವರನ್ನು ಅಭಿನಂದಿಸುವ ಮೂಲಕ ಅವರ ಮತ್ತಷ್ಟು ಸಾಧನೆಯತ್ತ ಹೆಜ್ಜೆ ಹಾಕುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಲ್ಲದೆ ಬಡ ಕ್ರೀಡಾಪಟುಗಳಿಗೆ ಅಗತ್ಯ ಸಲಕರಣೆಯನ್ನು ದಾನಿಗಳ ಸಹಕಾರದಿಂದ ದೊರೆಯುವಂತೆ ಮಾಡಿ, ಅವರ ಸಾಧನೆಗೆ ಮೆಟ್ಟಿಲಾಗಿ ಮುಂಜಾನೆ ಗೆಳೆಯರ ಬಳಗ ಕೆಲಸ ಮಾಡುತ್ತಿದೆ.ಉಡುಪಿಯ ಶಾಲಿನಿ ಶೆಟ್ಟಿ ಅವರು ಆಸ್ಪೆçÃಲಿಯಾದಲ್ಲಿ ನಡೆದ ಹಿರಿಯರ ವಿಶ್ವ ಅಥ್ಲೇಟಿಕ್ ಕ್ರೀಡಾಕೂಟದ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಪಡೆದಿರುವುದು ಇಡೀ ರಾಜ್ಯವೇ ಹೆಮ್ಮೆ ಪಡುವಂತಹ ಸಾಧನೆ. ಹಾಗಾಗಿ ಇಂದು ಅವರ ಜೊತೆಗೆ, ಅವರ ಪ್ರತಿನಿಧಿಸುತ್ತಿರುವ ಉಡುಪಿ ತಂಡವನ್ನು ಸಹ ಅಭಿನಂದಿಸಲಾಗುತ್ತಿದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹಿರಿಯ ಕ್ರೀಡಾಪಟು ಶಾಲಿನಿ ಶೆಟ್ಟಿ,ಮುಂಜಾನೆ ಗೆಳೆಯರ ಬಳಗ, ಕನ್ನಡ ಸೇನೆ ಕಾರ್ಯಕರ್ತರು ಕಾರ್ಯ ನನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.ನನ್ನ ಜೊತೆಗೆ ಹಲವಾರು ಪದಕ ಪಡೆದ ನಮ್ಮ ಮಕ್ಕಳನ್ನು ಅಭಿನಂದಿಸಿರುವುದು ಅವರ ಆತ್ಮಸ್ಥೆöÊರ್ಯವನ್ನು ಹೆಚ್ಚಿಸಿದೆ.ಇದಕ್ಕಾಗಿ ತುಮಕೂರಿನ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ವೇಳೆ ನಿವೃತ್ತ ಪ್ರಾಂಶುಪಾಲರಾದ ವೆಂಕಟೇಶ್, ಮುಂಜಾನೆ ಗೆಳೆಯರ ಬಳಗದ ಮಧು ಗೋಲ್ಡ್, ಮೇಜರ್ ನಾರಾಯಣಪ್ಪ, ನಟರಾಜು ಮತ್ತಿತರರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.2ರಿಂದ ಹೆಸರು ಕಾಳು ಖರೀದಿ ಕೇಂದ್ರ ಆರಂಭ!ವಿದ್ಯಾರ್ಥಿಗಳೊಂದಿಗೆ ಸಚಿವೆ ಶೋಭಾ ಕರಂದ್ಲಾಜೆ ಸಂವಾದಪಾವಗಡದಲ್ಲಿ ಬರ ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ಪರ್ಯಾಯ ವ್ಯವಸ್ಥೆ ಮಾಡದೆ ತುಮಕೂರಿನ ಹೆದ್ದಾರಿ ಬಂದ್ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ವಿಸಾಕಾ ಕಾರ್ಖಾನೆ ಮುಂದೆ ಬೃಹತ್‌ ಪ್ರತಿಭಟನೆ- Video ನೋಡಿಮೂಲಸೌಕರ್ಯ ಒದಗಿಸಲು ಆಗ್ರಹಿಸಿ ವಸತಿ ಶಾಲಾ ಮಕ್ಕಳ ಪ್ರತಿಭಟನೆಪಾವಗಡದಲ್ಲಿ ಟವರ್‌ ಹತ್ತಿ ಯುವತಿ ಆತ್ಮಹತ್ಯೆಗೆ ಯತ್ನ!ʼಕಲಬೆರಕೆ ರಹಿತ ಪೌಷ್ಠಿಕ ಆಹಾರ ಹಾಗೂ ಕಲಬೆರಕೆ ರಹಿತ ಔಷಧ ದೊರೆಯುವಂತಾಗಬೇಕುʼ- ಮುರಳೀಧರ ಹಾಲಪ್ಪಕೃಷಿ ಹೊಂಡಕ್ಕೆ ಬಿದ್ದ ಪತ್ನಿ ರಕ್ಷಿಸಲು ಹೋದ ಪತಿ; ಇಬ್ಬರೂ ನೀರುಪಾಲು!'ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ': ಸಿಪಿಐ ಮುಖಂಡ ಗಿರೀಶ್