LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಚಿವ ವಿ. ಸೋಮಣ್ಣ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ವ್ಯಕ್ತಿಯ ವಿರುದ್ಧ FIR

ವರದಿ ಚೇತನ್ ಜಿ ಜಾನಕಲ್

ಚಿಕ್ಕನಾಯಕನಹಳ್ಳಿ: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಹಾಗೂ ತುಮಕೂರು ಸಂಸದ ವಿ. ಸೋಮಣ್ಣ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಸೋವಿಶೆಟ್ಟಿಹಳ್ಳಿ ಗ್ರಾಮದ ಮರುಳಸಿದ್ದಯ್ಯ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಂಸದ ವಿ. ಸೋಮಣ್ಣ ಅವರ ಆಪ್ತ ಸಹಾಯಕ ಪಿ. ಮಹೇಶ್ ದೂರು ನೀಡಿದ್ದಾರೆ ಎಂದು FIRನಲ್ಲಿ ಉಲ್ಲೇಖಿಸಲಾಗಿದೆ.

ಸೆಪ್ಟೆಂಬರ್ 8ರಂದು ಸಂಜೆ ನವಿಲೆ ಕೆರೆ ಬಳಿ, ಕೆರೆಗೆ ನೀರು ಹರಿಸದ ವಿಚಾರವಾಗಿ ಮರುಳಸಿದ್ದಯ್ಯ ಅವರು ಯೂಟ್ಯೂಬ್‌ನಲ್ಲಿ ಸಚಿವ ವಿ. ಸೋಮಣ್ಣ ಅವರ ಕುರಿತು ಅವಹೇಳನಕಾರಿ ಹಾಗೂ ಅವಾಚ್ಯ ಪದಗಳನ್ನು ಬಳಸಿ ಮಾತನಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ತಿಳಿಸಲಾಗಿದೆ.

ದೂರಿನ ಆಧಾರದ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಕಲಂ 67 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 352, 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.2ರಿಂದ ಹೆಸರು ಕಾಳು ಖರೀದಿ ಕೇಂದ್ರ ಆರಂಭ!ವಿದ್ಯಾರ್ಥಿಗಳೊಂದಿಗೆ ಸಚಿವೆ ಶೋಭಾ ಕರಂದ್ಲಾಜೆ ಸಂವಾದಪಾವಗಡದಲ್ಲಿ ಬರ ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ಪರ್ಯಾಯ ವ್ಯವಸ್ಥೆ ಮಾಡದೆ ತುಮಕೂರಿನ ಹೆದ್ದಾರಿ ಬಂದ್ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ವಿಸಾಕಾ ಕಾರ್ಖಾನೆ ಮುಂದೆ ಬೃಹತ್‌ ಪ್ರತಿಭಟನೆ- Video ನೋಡಿಮೂಲಸೌಕರ್ಯ ಒದಗಿಸಲು ಆಗ್ರಹಿಸಿ ವಸತಿ ಶಾಲಾ ಮಕ್ಕಳ ಪ್ರತಿಭಟನೆಪಾವಗಡದಲ್ಲಿ ಟವರ್‌ ಹತ್ತಿ ಯುವತಿ ಆತ್ಮಹತ್ಯೆಗೆ ಯತ್ನ!ʼಕಲಬೆರಕೆ ರಹಿತ ಪೌಷ್ಠಿಕ ಆಹಾರ ಹಾಗೂ ಕಲಬೆರಕೆ ರಹಿತ ಔಷಧ ದೊರೆಯುವಂತಾಗಬೇಕುʼ- ಮುರಳೀಧರ ಹಾಲಪ್ಪಕೃಷಿ ಹೊಂಡಕ್ಕೆ ಬಿದ್ದ ಪತ್ನಿ ರಕ್ಷಿಸಲು ಹೋದ ಪತಿ; ಇಬ್ಬರೂ ನೀರುಪಾಲು!'ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ': ಸಿಪಿಐ ಮುಖಂಡ ಗಿರೀಶ್