ಶಿವಮೊಗ್ಗ: ಶಿವಮೊಗ್ಗದಲ್ಲಿ ದಸರಾ ಜಂಬೂಸವಾರಿ ವೇಳೆ 450 ಕೆಜಿ ಬೆಳ್ಳಿ ಅಂಬಾರಿಯನ್ನು ಹೊತ್ತಿದ್ದ ಆನೆ ಸೋಮಣ್ಣ ದಿಕ್ಕಾಪಾಲಾಗಿ ಓಡಿ, ಜನತೆಯನ್ನು ಭಯಭೀತಗೊಳಿಸುವ ಜೊತೆಗೆ ಪೊಲೀಸರಿಗೂ ದೊಡ್ಡ ತಲೆನೋವು ತಂದಿಟ್ಟಿದ್ದ. ಶಿವಮೊಗ್ಗದ ಶಿವಪ್ಪನಾಯಕ ಅರಮನೆಯಿಂದ ಆರಂಭವಾಗಿದ್ದ ಜಂಬೂ ಸವಾರಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಕೋಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸೋಮಣ್ಣ ಆನೆ ಅಡ್ಡಾದಿಡ್ಡಿಯಾಗಿ ಓಡಿದ್ದು ಅಂಬಾರಿ ಜಾರಿ ಬಿದ್ದಿದೆ. ಇನ್ನು ಆನೆ ಆರ್ಭಟಕ್ಕೆ ಕಾರುಗಳು ಹಾಗೂ ಬೈಕ್ ಗಳನ್ನು ಜಖಂಗೊಂಡಿವೆ. ಆನೆಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಅದಕ್ಕೆ ಅರವಳಿಕೆ ಚುಚ್ಚುಮದ್ದು ನೀಡಿ ಸೋಮಣ್ಣ ಆನೆ ನಿಯಂತ್ರಣಕ್ಕೆ ಬಂತು.
ಶಿವಮೊಗ್ಗ ದಸರಾದಲ್ಲಿ ಸಾಗರ್ ಆನೆಗೆ ಅಂಬಾರಿ ಹೊರಲು ತರಬೇತಿ ನೀಡಲಾಗಿತ್ತು. ಸಾಗರ್ ಆನೆಗೆ ಕಾಲು ನೋವು ಕಾಣಿಸಿಕೊಂಡಿದ್ದರಿಂದ ಸೋಮಣ್ಣ ಆನೆಗೆ ಮೊದಲ ಬಾರಿಗೆ ಅಂಬಾರಿ ಹೊರಿಸಲು ನಿರ್ಧರಿಸಲಾಗಿದ್ದು ಈ ಅವಘಡಕ್ಕೆ ಕಾರಣವಾಗಿದೆ ಎಂದು ಪರಾಮರ್ಶಿಸಲಾಗುತ್ತಿದೆ.