ಪಾವಗಡ. ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಘೋಷಣೆಯಾದ ಬೆನ್ನಲ್ಲೇ ಪಾವಗಡ ತಾಲೂಕಿನಲ್ಲಿ ವಿವಿಧ ಪಕ್ಷಗಳ ಮುಖಂಡರುಗಳು ಮಿಂಚಿನ ಸಂಚಾರ ನಡೆಸುತ್ತಿದ್ದು ಪಕ್ಷಾಂತರ ಪರ್ವ ಪ್ರಾರಂಭಿಸಿದ್ದಾರೆ.
ಪಟ್ಟಣದ ಜೆಡಿಎಸ್ ಮುಖಂಡರಾದ ಲಕ್ಷ್ಮೀ ನರಸಪ್ಪ, ಶ್ರೀಧರ್ ,ಶ್ರೀರಾಮಪ್ಪ, ಶ್ರೀನಿವಾಸ್, ಗೋಪಾಲ್, ಅವರುಗಳು ಶಾಸಕರಾದ ಹೆಚ್.ವಿ. ವೆಂಕಟೇಶ್ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ತೊರೆದು ಅಧಿಕೃತವಾಗಿ ಶುಕ್ರವಾರ ಸಂಜೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ನೂತನವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರನ್ನು ಶಾಸಕ ಹೆಚ್ ವಿ ವೆಂಕಟೇಶ್, ಪಕ್ಷಕ್ಕೆ ಸ್ವಾಗತ ಕೋರಿ ಶುಭ ಹಾರೈಸಿದರು.
ಜೆಡಿಎಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ನಾವು ಗುರುತಿಸಿಕೊಂಡಿದ್ದು ಆದರೆ ನಮಗೆ ಯಾವುದೇ ರೀತಿಯಾದಂತ ಬೆಂಬಲವಾಗಲಿ, ಪ್ರೋತ್ಸಾಹವಾಗಲಿ ಸ್ಥಾನಮಾನವಾಗಲಿ, ಪಕ್ಷದಲ್ಲಿ ಸಿಗದೇ ಇರುವುದರಿಂದ ನಾವುಗಳು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ ಎಂದು ಮುಖಂಡರುಗಳು ತಿಳಿಸಿದ್ದಾರೆ.
ಈ ವೇಳೆ ಪುರಸಭೆಯ ಮಾಜಿ ಅಧ್ಯಕ್ಷರು ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು, ಮಾಜಿ ಪುರಸಭಾ ಅಧ್ಯಕ್ಷರಾದ ಪಿ.ಹೆಚ್. ರಾಜೇಶ್, ಮಾಜಿ ಪುರಸಭಾ ಸದಸ್ಯರು, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕಲ್ಪವೃಕ್ಷ ರವಿ, ಸಮಾಜ ಸೇವಕ ಬತ್ತಿನೇನಿ ನಾಗೇಂದ್ರ ರಾವ್, ಆರ್. ಎ. ಬಾಲಾಜಿ, ಜಿ. ಟಿ. ರೆಡ್ಡಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತಿತರರು ಇದ್ದರು..