ಮಧುಗಿರಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೊದಲನೇ ಅಂತಸ್ತಿನ ಮೇಲ್ಚಾವಣಿಯಲ್ಲಿ ಅನಗತ್ಯ ಗಿಡಗೆಂಟೆಗಳು ಬೆಳೆದಿದ್ದರು ಸಹ ಆ ಗಿಡಗಳನ್ನು ತೆಗೆದು ಹಾಕಿಸಲು ಕಾಲೇಜಿನ ಸಿಬ್ಬಂದಿ ಇದೂವರೆವಿಗೂ ಮುಂದಾಗಿಲ್ಲ
ಈ ಹಿಂದೆ ನಿರ್ಮಿಸಿರುವ ಕಟ್ಟಡದ ಮೇಲ್ಬಾಗದಲ್ಲಿ ಅನಗತ್ಯವಾಗಿ ಗಿಡಗೆಂಟೆಗಳು ಬೆಳೆದು ಕಟ್ಟಡವು ಸಣ್ಣ ಸಣ್ಣದಾಗಿ ಅಲ್ಲಲ್ಲಿ ಬಿರುಕು ಬಿಡಲಾರಂಭಿಸಿದೆ. ಇದೇ ಮೇಲ್ಚಾವಣಿಯಲ್ಲಿ ಬಿರುಕುಗಳು ಮೂಡುತ್ತಿರುವುದು ಅನಗತ್ಯವಾಗಿ ಬೆಳೆದಿರುವ ಗಿಡಗಳ ಬೇರುಗಳಿಂದಾಗಿ ಸಿಮೆಂಟ್ ನಿಂದ ನಿರ್ಮಿಸಿರುವ ಕಟ್ಟಡಕ್ಕೆ ಹಾನಿ ಉಂಟಾಗುತ್ತಿದ್ದು ಮುಂದೆ ಒಂದಲ್ಲಾ ಒಂದು ದಿನ ಕಟ್ಟಡದಲ್ಲಿ ಮಳೆಯ ನೀರು ಜಿನುಗಿ ಕಟ್ಟಡವು ಬಳಕೆಗೆ ಬಾರದಂತಾಗುತ್ತದೆ.
ಈ ಕಾಲೇಜಿನಲ್ಲಿ ತಾಲೂಕಿನ ಪ್ರತಿ ಚುನಾವಣೆಯ ಪ್ರಕ್ರಿಯೆ ಆರಂಭದಿಂದ ಹಿಡಿದು ಫಲಿತಾಂಶ ಬರುವವರೆವಿಗೂ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಹ ಆಗಾಗ ನಡೆಯುತ್ತಿರುತ್ತವೆ ಈ ಕಟ್ಟಡದ ಅವಶ್ಯಕತೆಯು ವಿದ್ಯಾರ್ಥಿಗಳಿಗೆ,ಸಾರ್ವಜನಿಕರಿಗೆ ಹೆಚ್ಚಿರುವುದರಿಂದ ವರ್ಷಕೊಮ್ಮೆಯಾದರೂ ಕಟ್ಟಡಗಳ ಮೇಲ್ಚಾವಣಿಯಲ್ಲಿ ಬೆಳೆದಿರುವ ಗಿಡಗಳು ಮತ್ತು ಕಸ ಕಡ್ಡಿಗಳನ್ನು ತೆರವುಗೊಳಿಸಿ ಭದ್ರ ಪಡಿಸಿದರೆ ಕಟ್ಟಡ ಮತ್ತು ಕೊಠಡಿಗಳು ಬಾಳಿಕೆ ಬರಲಿವೆ ಕೊಡಲೇ ಕಾಲೇಜಿನ ಸಿಬ್ಬಂದಿಗಳು ಅನಗತ್ಯ ಗಿಡಗಳ ತೆರವಿಗೆ ಮುಂದಾಗ ಬೇಕೆಂದು ಪ್ರಜ್ಞಾವಂತರು ಹಾಗೂ ವಾಯು ವಿಹಾರಿಗಳು ಸಂಬಂಧಪಟ್ಟರಲ್ಲಿ ಆಗ್ರಹಿಸಿದ್ದಾರೆ.