ಪಾವಗಡ: ಪಟ್ಟಣದ ವಿನಾಯಕ ನಗರದಲ್ಲಿರುವ ಶ್ರೀ ಯೋಗಿ ನಾರಾಯಣಸ್ವಾಮಿ ದೇವಸ್ಥಾನದ ಆವರಣದಲ್ಲಿ 28ನೇ ವರ್ಷದ ವಿನಾಯಕ ಬಳಗದ ಗಣೇಶನ ಪೆಂಡಾಲಿನಲ್ಲಿ ಹರಾಜಿನಲ್ಲಿಟ್ಟಿದ್ದ ಲಡ್ಡುತುಂಬಿದ ತಟ್ಟೆಯನ್ನು ಪಟ್ಟಣದ ಮುಖಂಡರಾದ ಗುಪ್ತ ಅವರು 1,30,000ಕ್ಕೆ ಹರಾಜಿನಲ್ಲಿ ಬಿಡ್ ಮಾಡುವ ಮೂಲಕ ತಮ್ಮದಾಗಿಸಿಕೊಂಡಿದ್ದಾರೆ.
ಗಣೇಶನ ಮೂರ್ತಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗಿಸಿದ ನಂತರ ರಾತ್ರಿ 12 ಗಂಟೆವರೆಗೂ ಸುಧೀರ್ಘವಾಗಿ ಈ ಒಂದು ಲಡ್ಡು ಹರಾಜು ಪ್ರಕ್ರಿಯೆ ನಡೆಯಿತು. ಪ್ರಾರಂಭದಲ್ಲಿ ಅತ್ಯಂತ ನೀರಸವಾಗಿಹರಾಜು ಪ್ರಕ್ರಿಯೆ ಸಾಗಿತು, ನಂತರ ಹಂತ ಹಂತವಾಗಿ 50 ಮತ್ತು 70 ಹಾಗೂ 1 ಲಕ್ಷ.... ಹೀಗೆ ಅಂತಿಮವಾಗಿ ರೂ. 1,30,000 ಕ್ಕೆ ಗುಪ್ತ ಅವರು ವಿನಾಯಕ ಗೆಳೆಯರ ಬಳಗದ ಲಡ್ಡನ್ನು ತಮ್ಮದಾಗಿಸಿಕೊಂಡಿದ್ದಾರೆ,
ಹಲವು ಕಡೆ ಇಂದಿಗೂ ಈ ರೀತಿಯ ಹರಾಜು ಪ್ರಕ್ರಿಯೆಗಳು ನಡೆಯುತ್ತವೆ. ಈ ಹರಾಜಿನಲ್ಲಿ ಭಾಗವಹಿಸುವವರಿಗೆ ಒಂದು ಕಡೆ ಭಕ್ತಿ ಮತ್ತೊಂದು ಕಡೆ ಪ್ರತಿಷ್ಠೆಯಾಗಿರುತ್ತದೆ. ಇಂತಹ ಹರಾಜುಗಳಿಂದ ಬರುವ ಈ ದೊಡ್ಡ ಮೊತ್ತ ಇಂಥದ್ದೇ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲು ನೆರವಾಗುತ್ತದೆ. ಅಂಘ ಕಟ್ಟಿ ಶ್ರಮಿಸುವ ಯುವಕರಿಗೆ ಬೆಂಬಲದಂತಾಗುತ್ತದೆ.
ಹರಾಜು ಪ್ರಕ್ರಿಯೆಯಲ್ಲಿ ಮಾಜಿ ಪುರಸಭಾ ಸದಸ್ಯರಾದ ವೆಂಕಟರಮಣಪ್ಪ, ವಿನಾಯಕ ಗೆಳೆಯರ ಬಳಗದ ಮುಖ್ಯ ರೂವಾರಿ ಭರತ್, ವಿನಾಯಕ ಗೆಳೆಯರ ಬಳಗದ ರಾಘವೇಂದ್ರ ಗುರಪ್ಪ, ಗಜ ರಮೇಶ್, ದಿಲೀಪ್, ನವೀನ್, ಗಣೇಶ್, ವಿಶಾಲ್ ಪ್ರಜ್ವಲ್, ಸುರೇಶ್ ಗುರಪ್ಪ, ಪವರ್ ಸ್ಟಾರ್ ಅಭಿಮಾನಿ ಸಂಘದ ಸುಪ್ರಜ್ ಮತ್ತಿತರರು ಇದ್ದರು.
ಹರಾಜು ಪ್ರಕ್ರಿಯೆಯನ್ನು ಸತ್ಯ ಲೋಕೇಶ್ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು, ಹರಾಜು ಪ್ರಕ್ರಿಯೆಯಲ್ಲಿ ಎಸ್. ಎಸ್. ಕೆ.ಸಂಘದ ಮಾಜಿ ಅಧ್ಯಕ್ಷರಾದ ಆನಂದರಾವ್, ನಿರ್ದೇಶಕರಾದ ಅನಿಲ್ ಕುಮಾರ್, ಎಂ.ಎಸ್.ವಿಶ್ವನಾಥ್, ರಘುನಂದನ್, ಎಸ್ ಎಸ್ ಕೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಿನಯ್ ಬಾಬು, ಮತ್ತು ಗೊಬ್ಬರದ ಅಂಗಡಿ ಮಾಲೀಕರಾದ ಗಂಗಾಧರ್, ವಿಜಯವಾಡ ಶ್ರೀನಿವಾಸ್,ಹಾಗೂ ಶ್ರೀವಾರಿ ಜ್ಯುವೆಲರ್ಸ್, ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿ ಸಂಘ, ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿ ಸಂಘ, ಮತ್ತಿತರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು, ಹರಾಜು ಪ್ರಕ್ರಿಯೆ ಮುಗಿದ ನಂತರ ವಿಶೇಷವಾಗಿ ಟೀ ಟಾಕ್ ಮಾಲೀಕರಿಂದ ಮತ್ತು ಎಸ್. ಎಸ್. ಕೆ.ಸಂಘದ ನೌಕರರಾದ ಸುಧಾಕರ ಅವರು ಎಲ್ಲರಿಗೂ ಸಿಹಿ ಬೋಜನ ಏರ್ಪಡಿಸಿದ್ದರು.