LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ತುಮಕೂರು ದಸರಾ ಉತ್ಸವದ ಹೆಸರಲ್ಲಿ ಕೋಟ್ಯಾಂತರ ರೂ. ಅಕ್ರಮ

ಜಿಲ್ಲಾಡಳಿತದ ವಿರುದ್ಧ ದಸರಾ ಲೆಕ್ಕ ಕೊಡಿ ಅಭಿಯಾನ: ಜಿ.ಎಸ್. ಬಸವರಾಜು

ತುಮಕೂರು: ಜಿಲ್ಲಾಡಳಿತದ ವತಿಯಿಂದ 2025ರಲ್ಲಿ ನಗರದಲ್ಲಿ ಆಯೋಜಿಸಿದ್ದ ’ತುಮಕೂರು ದಸರಾ’ ಕಾರ್ಯಕ್ರಮದಲ್ಲಿ ಯಾವುದೇ ನಿಯಮಗಳನ್ನು ಪಾಲನೆ ಮಾಡದೆ, ಕೋಟ್ಯಾಂತರ ರೂ. ಅವ್ಯವಹಾರ ನಡೆದಿದ್ದು, ದಸರಾ ಉತ್ಸವದ ಖರ್ಚು, ವೆಚ್ಚಗಳ ಲೆಕ್ಕ ಕೊಡಿ ಎಂಬ ಅಭಿಯಾನ ಆರಂಭಿಸಲಾಗುವುದು. ಲೆಕ್ಕ ಕೊಡದೆ ಈ ವರ್ಷದ ದಸರಾ ಉತ್ಸವ ಮಾಡಕೂಡದು ಎಂದು ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್.ಬಸವರಾಜು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಉತ್ಸವ ಸಂಬಂಧ ನಗರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲವಾಗಿ ಅಧಿಕಾರಿಗಳ ಪ್ರಭುತ್ವ ಕಂಡುಬಂದಿದೆ. ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸಿದ್ದಾರೆ. ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೋರಿದ್ದು, ಅವ್ಯವಹಾರ ಮಾಡುವ ಉದ್ದೇಶದಿಂದಲೇ ದಸರಾ ಉತ್ಸವ ಮಾಡಲಾಗುತ್ತಿದೆ ಎಂಬ ಅನುಮಾನ ಬಂದಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಿಂದ ಪಡೆದ ಅಧಿಕೃತ ದಾಖಲೆಗಳ ಪ್ರಕಾರ ಎಂದು ೨.೫೮ಕೋಟಿ ರೂ. ಜಿಲ್ಲಾಧಿಕಾರಿ ಖಾತೆಗೆ ಬಂದಿದ್ದು, ೫೬ ಚೆಕ್ ಮೂಲಕ 2.36ಕೋಟಿ ರೂ. ಖರ್ಚು ಮಾಡಿದ್ದು 22 ಲಕ್ಷ ಉಳಿಸಲಾಗಿದೆ. ಖರ್ಚಿಗೆ ಸಂಬಂಧಪಟ್ಟ ಯಾವುದೇ ರಸೀದಿ, ವೋಚರ್, ಬಿಲ್, ಕೋಟೇಷನ್ ದಾಖಲೆಗಳಿಲ್ಲ. ತಹಸೀಲ್ದಾರರಿಗೆ 5 ಚೆಕ್ ಮೂಲಕ 46.50 ಲಕ್ಷ ನೀಡಿದ್ದು ಈ ಖರ್ಚಿನ ಬಗ್ಗೆಯೂ ದಾಖಲೆಗಳಿಲ್ಲ, ತೋಟಗಾರಿಕೆ ಇಲಾಖೆ ಪಡೆದ 35 ಲಕ್ಷ ರೂ. ದಾಖಲೆಗಳಿಲ್ಲ. ಸರ್ಕಾರದಿಂದ 1.50 ಕೋಟಿ ರೂ. ಬಿಡುಗಡೆಯಾಗಿದ್ದು ಈ ಹಣದ ಬಗ್ಗೆಯೂ ದಾಖಲೆಗಳಿಲ್ಲ, ಮಹಾನಗರ ಪಾಲಿಕೆ ದಸರಾ ಮುಗಿದು ಒಂದು ತಿಂಗಳ ನಂತರ ಡಿಸಿ ಖಾತೆಗೆ ೫೦ ಲಕ್ಷ ರೂ. ನಗದು ಜಮಾ ಮಾಡಲಾಗಿದೆ. ಒಟ್ಟು 2 ಕೋಟಿ ರೂ. ಗಳ ಖರ್ಚು, ವೆಚ್ಚದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಜಿ.ಎಸ್. ಬಸವರಾಜು ಹೇಳಿದರು.

ಮಹಾನಗರ ಪಾಲಿಕೆಯಿಂದ ಸಾರ್ವಜನಿಕರ ತೆರಿಗೆ ಹಣ 1.05 ಕೋಟಿ ರೂ. ದಸರಾ ಉತ್ಸವಕ್ಕಾಗಿ ಖರ್ಚು ಮಾಡಲಾಗಿದೆ, ಸರ್ಕಾರ ನೀಡಿರುವ ಹಣವನ್ನು ಟೆಂಡರ್ ಸೇರಿದಂತೆ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಿದ್ದರೂ ಜಿಲ್ಲಾಧಿಕಾರಿ ತಮಗೆ ಇಷ್ಟ ಬಂದಂತೆ ಹಣ ಪೋಲು ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಸುಮಾರು ನಾಲ್ಕುವರೆ ಕೋಟಿ ರೂ. ಹಣ ಖರ್ಚು ಮಾಡಿದ್ದರೂ ಅಧಿಕೃತ ದಾಖಲೆಗಳಿಲ್ಲ, ಹಾಗಾಗಿ, ಇದರಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವ ಅನುಮಾನವಿದೆ. ಹಣ ಹೊಡೆಯಲಷ್ಟೇ ದಸರಾ ಉತ್ಸವ ಮಾಡಲಾಗುತ್ತಿದೆ ಎಂದು ತುಮಕೂರು ದಸರಾ ಆಯೋಜಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗಿದೆ ಎಂದರು.

ಲೆಕ್ಕ ಪರಿಶೋಧಕರ ದೃಢೀಕರಿಸಿದ ವರದಿ ಕಳೆದ ಎರಡು ವರ್ಷದಿಂದಲೂ ಸಲ್ಲಿಕೆಯಾಗಿಲ್ಲ, ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣ, ಸರ್ಕಾರದಿಂದ ನೀಡಿರುವ ಹಣದಲ್ಲಿ ಅವ್ಯವಹಾರ ನಡೆದಿರುವುದು ಮೇಲು ನೋಟಕ್ಕೆ ಕಂಡುಬಂದಿದೆ. 2025ನೇ ಸಾಲಿನ ಹಣದ ಬಗ್ಗೆ ಸಾರ್ವಜನಿಕರಿಗೆ ಲೆಕ್ಕಕೊಟ್ಟು ಈ ಬಾರಿಯ ದಸರಾ ಮಾಡಲಿ, ಇದಾಗದಿದ್ದರೆ ಜಿಲ್ಲಾಡಳಿತದ ವಿರುದ್ಧ ಲೆಕ್ಕ ಕೊಡಿ ಅಭಿಯಾನ ಆರಂಭಿಸಲಾಗುವುದು ಎಂದು ಜಿ.ಎಸ್. ಬಸವರಾಜು ಹೇಳಿದರು.

ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಉಪಾಧ್ಯಕ್ಷ ಜಿ.ಕೆ.ಶ್ರೀನಿವಾಸ್ ಮಾತನಾಡಿ, ತುಮಕೂರು ಮಹಾನಗರ ಪಾಲಿಕೆ ನಿಧಿಯನ್ನು ಖರ್ಚು ಮಾಡಲು ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕು, ಈಗ ಚುನಾಯಿತ ಸದಸ್ಯರು ಇಲ್ಲದ ಕಾರಣದಿಂದ ಆಡಳಿತಾಧಿಕಾರಿ ಅನುಮತಿ ಪಡೆಯಬೇಕಿದ್ದು, ಅನುಮತಿ ಪಡೆಯದೆ ನಿಯಮ ಉಲ್ಲಂಘಿಸಿ ಜನರ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. ಪ್ಲೆಕ್ಸ್ ಹಾಕಲು ಪಾಲಿಕೆಗೆ ಶುಲ್ಕ ಕಟ್ಟಿ ಅನುಮತಿ ಪಡೆಯಬೇಕು ಆದರೆ, ದಸರಾ ಉತ್ಸವ ಸಮಿತಿಯವರು ಯಾವುದೇ ಪ್ಲಕ್ಸ್‌ಗೆ ಅನುಮತಿ ಪಡೆದಿಲ್ಲ, ಶುಲ್ಕ ಪಾವತಿಸಿಲ್ಲ. ಗಣೇಶೋತ್ಸವದಲ್ಲಿ ಮಾತ್ರ ಕಾನೂನು ಪಾಲಿಸುವ ದಸರಾ ಆಚರಣೆಗೆ ಯಾವುದೇ ನಿಯಮ ಪಾಲಿಸುತ್ತಿಲ್ಲ ಎಂದು ದೂರಿದರು.

ದಸರಾದ ಮೆರವಣಿಗೆಗೂ ಅನುಮತಿ ಪಡೆಯುತ್ತಿಲ್ಲ, ನಗರದಲ್ಲಿ ಮಾಡುವ ದೀಪ ಅಲಂಕಾರಕ್ಕೆ ಬೆಸ್ಕಾಂಗೆ ಶುಲ್ಕ ಪಾವತಿಸಬೇಕು, 60 ಕಿ.ವ್ಯಾ ಪ್ರತಿದಿನ ವಿದ್ಯುತ್ ಬಳಸಿದ್ದು ಲಕ್ಷಾಂತರ ರೂ. ಪಾವತಿಸಬೇಕಾಗಿದ್ದು, ಪಾವತಿಸದೆ ಬೆಸ್ಕಾಂಗೂ ವಂಚಿಸಲಾಗಿದೆ. ದಸರಾ ಉತ್ಸವದಲ್ಲಿ ಜಿಲ್ಲಾಡಳಿತವು ಎಲ್ಲಾ ಹಂತಗಳಲ್ಲೂ ನಿಯಮಗಳನ್ನು ಉಲ್ಲಂಘಿಸಿ, ಅಧಿಕಾರ ದುರುಪಯೋಗ ಮಾಡಿಕೊಳಗಳಲಾಗಿದೆ. ಈ ದೇಶದ ಕಾನೂನಿಗೆ ಜಿಲ್ಲಾಡಳಿತವು ಅತೀತವೆ? ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಬಿ.ಆರ್.ವಿಜಯಕುಮಾರ್, ಶೃತಿ ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.2ರಿಂದ ಹೆಸರು ಕಾಳು ಖರೀದಿ ಕೇಂದ್ರ ಆರಂಭ!ವಿದ್ಯಾರ್ಥಿಗಳೊಂದಿಗೆ ಸಚಿವೆ ಶೋಭಾ ಕರಂದ್ಲಾಜೆ ಸಂವಾದಪಾವಗಡದಲ್ಲಿ ಬರ ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ಪರ್ಯಾಯ ವ್ಯವಸ್ಥೆ ಮಾಡದೆ ತುಮಕೂರಿನ ಹೆದ್ದಾರಿ ಬಂದ್ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ವಿಸಾಕಾ ಕಾರ್ಖಾನೆ ಮುಂದೆ ಬೃಹತ್‌ ಪ್ರತಿಭಟನೆ- Video ನೋಡಿಮೂಲಸೌಕರ್ಯ ಒದಗಿಸಲು ಆಗ್ರಹಿಸಿ ವಸತಿ ಶಾಲಾ ಮಕ್ಕಳ ಪ್ರತಿಭಟನೆಪಾವಗಡದಲ್ಲಿ ಟವರ್‌ ಹತ್ತಿ ಯುವತಿ ಆತ್ಮಹತ್ಯೆಗೆ ಯತ್ನ!ʼಕಲಬೆರಕೆ ರಹಿತ ಪೌಷ್ಠಿಕ ಆಹಾರ ಹಾಗೂ ಕಲಬೆರಕೆ ರಹಿತ ಔಷಧ ದೊರೆಯುವಂತಾಗಬೇಕುʼ- ಮುರಳೀಧರ ಹಾಲಪ್ಪಕೃಷಿ ಹೊಂಡಕ್ಕೆ ಬಿದ್ದ ಪತ್ನಿ ರಕ್ಷಿಸಲು ಹೋದ ಪತಿ; ಇಬ್ಬರೂ ನೀರುಪಾಲು!'ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ': ಸಿಪಿಐ ಮುಖಂಡ ಗಿರೀಶ್