LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನಿರುವಗಲ್–ಗೊಲ್ಲರಹಟ್ಟಿ ರಸ್ತೆ ಕಾಮಗಾರಿಯಲ್ಲಿ ಅಕ್ರಮ!: ಗ್ರಾಮಸ್ಥರ ಆಕ್ರೋಶ

ಕೆರೆಯ ನೀರು ಬಳಕೆ, ಕಳಪೆ ಕಾಮಗಾರಿ ಆರೋಪ – ತಹಶೀಲ್ದಾರ್‌ಗೆ ಲಿಖಿತ ದೂರು, ಧರಣಿ ಎಚ್ಚರಿಕೆ

ವರದಿ ಚೇತನ್ ಜಿ ಜಾನಕಲ್

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಹೋಬಳಿಯ ನಿರುವಗಲ್ ಗ್ರಾಮದಿಂದ ನಿರುವಗಲ್ ಗೊಲ್ಲರಹಟ್ಟಿವರೆಗೆ ಸುಮಾರು ಒಂದು ಕಿಲೋಮೀಟರ್ ಉದ್ದದ ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯಲ್ಲಿ ನಿಯಮ ಉಲ್ಲಂಘನೆ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಸ್ಥಳದಲ್ಲಿ ಯಾವುದೇ ನಾಮಫಲಕ ಅಳವಡಿಸದೆ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಇದರಿಂದ ಕಾಮಗಾರಿಯ ವೆಚ್ಚ, ಗುತ್ತಿಗೆದಾರರ ವಿವರ ಹಾಗೂ ಇತರ ಮಾಹಿತಿಗಳು ಸಾರ್ವಜನಿಕರಿಗೆ ತಿಳಿಯದಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಜಾನುವಾರುಗಳಿಗೆ ನೀರಿಲ್ಲ, ರಸ್ತೆ ಕಾಮಗಾರಿಗೆ ಟ್ಯಾಂಕರ್‌ ನೀರು! ಬರದ ಪರಿಸ್ಥಿತಿಯಲ್ಲಿ ನಿರುವಗಲ್ ಗ್ರಾಮದ ಕೆರೆಯಲ್ಲಿ ದನಕರು ಹಾಗೂ ಕುರಿಗಳಿಗೆ ಕುಡಿಯಲು ಇರುವ ಅಲ್ಪಸ್ವಲ್ಪ ನೀರನ್ನೂ ಸಮರ್ಪಕವಾಗಿ ಬಳಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ರಸ್ತೆ ಕಾಮಗಾರಿಗಾಗಿ ಪ್ರತಿದಿನ ಮೂರು ಟ್ಯಾಂಕರ್‌ಗಳ ಮೂಲಕ 50ಕ್ಕೂ ಹೆಚ್ಚು ಟ್ಯಾಂಕರ್‌ ನೀರನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜಾನುವಾರುಗಳ ಕುಡಿಯುವ ನೀರಿನ ಅಗತ್ಯವನ್ನು ಕಡೆಗಣಿಸಿ ಕಾಮಗಾರಿಗೆ ನೀರು ಬಳಸುತ್ತಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

news_1792160441_0_565.webp

ಕಳಪೆ ಕಾಮಗಾರಿ ಆರೋಪ: ಚರಂಡಿಯಲ್ಲೂ ನೀರು ಬ್ಲಾಕ್‌! ಸಿಸಿ ರಸ್ತೆ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗುತ್ತಿದೆ ಎಂಬುದು ಗ್ರಾಮಸ್ಥರ ಮತ್ತೊಂದು ಆರೋಪವಾಗಿದೆ. ರಸ್ತೆಯ ಪಕ್ಕದಲ್ಲಿ ನಿರ್ಮಿಸಿರುವ ಬಾಕ್ಸ್ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ತಡೆ ಉಂಟಾಗಿದೆ. ಈ ಕುರಿತು ಇಂಜಿನಿಯರ್‌ಗಳನ್ನು ಪ್ರಶ್ನಿಸಿದರೂ ಸಮರ್ಪಕ ಉತ್ತರ ದೊರೆಯುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಆರಂಭದಿಂದಲೂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನಿಸಿದಾಗ ಕೆಲವರು ದಬ್ಬಾಳಿಕೆಯ ಧಾಟಿಯಲ್ಲಿ ಮಾತನಾಡಿದ್ದಾರೆ ಎಂದು ದೂರಿದ್ದಾರೆ.

ಸ್ಥಳಕ್ಕೆ ಬಂದ ಗುತ್ತಿಗೆದಾರ, ಇಂಜಿನಿಯರ್‌ಗಳ ವಿರುದ್ಧ ಆಕ್ರೋಶ ಕಾಮಗಾರಿಯಲ್ಲಿನ ಲೋಪದೋಷಗಳ ಕುರಿತು ಗ್ರಾಮಸ್ಥರ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಹಾಗೂ ಇಂಜಿನಿಯರ್‌ಗಳು ಸ್ಥಳಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಮಾತಿನ ಚಕಮಕಿ ಉಂಟಾಗಿದೆ ಎಂದು ತಿಳಿದುಬಂದಿದೆ. ಕಾಮಗಾರಿಯನ್ನು ನಿಯಮಾನುಸಾರ ನಡೆಸುವ ಬದಲು ಬೇಕಾಬಿಟ್ಟಿಯಾಗಿ ಕೆಲಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಹಶೀಲ್ದಾರ್‌ಗೆ ದೂರು: ಧರಣಿ ನಡೆಸುವ ಎಚ್ಚರಿಕೆ
ರಸ್ತೆ ಕಾಮಗಾರಿಯ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಲೋಪದೋಷಗಳಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ತಾಲ್ಲೂಕು ತಹಶೀಲ್ದಾರ್‌ಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರಸ್ತೆ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಯಮಾನುಸಾರ ಪೂರ್ಣಗೊಳಿಸಬೇಕು. ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ, ನಿರುವಗಲ್–ಗೊಲ್ಲರಹಟ್ಟಿ ಸಿಸಿ ರಸ್ತೆ ಕಾಮಗಾರಿಯ ಕುರಿತಾದ ಗ್ರಾಮಸ್ಥರ ಆರೋಪಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ, ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶ ಬಹಿರಂಗಪಡಿಸಬೇಕಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.2ರಿಂದ ಹೆಸರು ಕಾಳು ಖರೀದಿ ಕೇಂದ್ರ ಆರಂಭ!ವಿದ್ಯಾರ್ಥಿಗಳೊಂದಿಗೆ ಸಚಿವೆ ಶೋಭಾ ಕರಂದ್ಲಾಜೆ ಸಂವಾದಪಾವಗಡದಲ್ಲಿ ಬರ ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ಪರ್ಯಾಯ ವ್ಯವಸ್ಥೆ ಮಾಡದೆ ತುಮಕೂರಿನ ಹೆದ್ದಾರಿ ಬಂದ್ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ವಿಸಾಕಾ ಕಾರ್ಖಾನೆ ಮುಂದೆ ಬೃಹತ್‌ ಪ್ರತಿಭಟನೆ- Video ನೋಡಿಮೂಲಸೌಕರ್ಯ ಒದಗಿಸಲು ಆಗ್ರಹಿಸಿ ವಸತಿ ಶಾಲಾ ಮಕ್ಕಳ ಪ್ರತಿಭಟನೆಪಾವಗಡದಲ್ಲಿ ಟವರ್‌ ಹತ್ತಿ ಯುವತಿ ಆತ್ಮಹತ್ಯೆಗೆ ಯತ್ನ!ʼಕಲಬೆರಕೆ ರಹಿತ ಪೌಷ್ಠಿಕ ಆಹಾರ ಹಾಗೂ ಕಲಬೆರಕೆ ರಹಿತ ಔಷಧ ದೊರೆಯುವಂತಾಗಬೇಕುʼ- ಮುರಳೀಧರ ಹಾಲಪ್ಪಕೃಷಿ ಹೊಂಡಕ್ಕೆ ಬಿದ್ದ ಪತ್ನಿ ರಕ್ಷಿಸಲು ಹೋದ ಪತಿ; ಇಬ್ಬರೂ ನೀರುಪಾಲು!'ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ': ಸಿಪಿಐ ಮುಖಂಡ ಗಿರೀಶ್