ತುಮಕೂರು: ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ. ಅದನ್ನು ಸ್ಥಾಪಿಸಿದವರು ಕೂಡ ಓರ್ವ ಅಧಿಕಾರಿ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ. ಹಾಗಾಗಿ ಕಸಾಪಕ್ಕೆ ಅಧಿಕಾರಿಗಳು ಸ್ಪರ್ಧಿಸುವುದು ಬೇಡ ಎಂಬ ವಾದದಲ್ಲಿ ಯಾವುದೇ ಹುರುಳು ಇಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಮಂಡಳಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಕ್ಷ ಆಡಳಿತಗಾರರೆನಿಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಕಸಾಪಕ್ಕೆ ಆಜೀವ ಸದಸ್ಯರೆಲ್ಲರೂ ಸ್ಪರ್ಧಿಸಲು ಅವಕಾಶವಿದೆ .ಹಾಗಾಗಿ ನಿವೃತ್ತ ಅಧಿಕಾರಿಗಳು ಬೇಡ ಎಂಬುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ವಿದ್ಯಾರ್ಥಿ ದಿಸೆಯಿಂದಲೂ ಕನ್ನಡವನ್ನು ಒಪ್ಪಿಕೊಂಡು, ಅಪ್ಪಿಕೊಂಡವನು,ಕನ್ನಡದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಬರೆದು ಕೇಂದ್ರ ಸೇವೆಗೆ ಆಯ್ಕೆಯಾಗಿ, ತದನಂತರ ರಾಜ್ಯದ ಕೆ.ಎ.ಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿ, ಅಧಿಕಾರಿಯಾಗಿ ಕೆಲಸ ಮಾಡಿದ ಎಲ್ಲ ಕಡೆಯೂ ಕನ್ನಡ ಭಾಷೆ, ನಾಡು, ನುಡಿಗೆ ನನ್ನ ಕೈಲಾದ ಸಹಾಯ, ಸಹಕಾರ ನೀಡುತ್ತಲೇ ಬಂದಿದ್ದೇನೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯಾಗಿ, ಗಡಿನಾಡ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷನಾಗಿ, ಗಡಿನಾಡಿನ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ .ಹಿರಿಯರ ಒತ್ತಾಸೆಯ ಮೇರೆಗೆ ಕಸಾಪ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದು, ಮತದಾರರು ಅವಕಾಶ ಕಲ್ಪಿಸುವಂತೆ ಡಾ.ಸಿ.ಸೋಮಶೇಖರ್ ಮನವಿ ಮಾಡಿದರು.

ಏಕಕಾಲದಲ್ಲಿ ಅಧಿಕಾರಿಯಾಗಿ, ಸಾಹಿತಿಯಾಗಿ, ಲೇಖಕನಾ
ಡಾ.ಸಿ.ಸೋಮಶೇಖರ್ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದನ್ನು ಬೆಂಬಲಿಸಿ ಮಾತನಾಡಿದ ಹಿರಿಯರಾದ ಕಲಾಶ್ರೀ ಡಾ.ಲಕ್ಷ್ಮಣ್‌ದಾಸ್, ಡಾ.ಸಿ.ಸೋಮಶೇ
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ ,ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಆಗಿದ್ದಾಗ ಮತ್ತು ಗಡಿ ನಾಡ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳಿಗೆ ಹಲವು ರೀತಿಯಲ್ಲಿ ಸಹಕಾರ ಮತ್ತು ಸಹಾಯ ನೀಡಿದ್ದಾರೆ.ಬಹುತೇಕ ಕನ್ನಡಪರ ಸಂಘಟನೆಗಳು ಅವರ ಬೆಂಬಲಕ್ಕೆ ನಿಂತಿವೆ. ತುಮಕೂರಿನಲ್ಲಿ ಅವರ ಗೆಲುವಿಗೆ ಕನ್ನಡ ಸೇನೆ ಸೇರಿದಂತೆ ಎಲ್ಲಾ ಕನ್ನಡಪರ ಸಂಘನೆಗಳು ಶ್ರಮಿಸಲಿವೆ ಎಂದರು.
ಸಂಶೋಧಕ ಹಾಗೂ ನಿವೃತ್ತಿ ಉಪನ್ಯಾಸಕ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ,ಕನ್ನಡ ಸಂಸ್ಕೃತಿ ಎಂದರೆ ನೆನಪಾಗುವುದು ಡಾ.ಸಿ.ಸೋಮಶೇಖರ್, ಅವರ ಜಿಲ್ಲಾಧಿಕಾರಿಯಾಗಿದ್ದಾಗ ಆಚರಿಸಿದ ಜಿಲ್ಲಾ ಉತ್ಸವ ಇಂದಿಗೂ ಜಿಲ್ಲೆಯ ಜನರ ಮನಸ್ಸಿನಲ್ಲಿ ಅಚ್ಚ ಹಸಿರಾಗಿದೆ.ಅವರು ಕಸಾಪ ರಾಜ್ಯಾಧ್ಯಕ್ಷರಾದರೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ಮತ್ತಷ್ಟು ಎತ್ತರಕ್ಕೆ ಹೋಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯರಾದ ಡಾ.ಪದ್ಮಪ್ರಸಾದ್, ಡಾ.ಕಂಟಲಗೆರೆ ಸಣ್ಣಹೊನ್ನಯ್ಯ, ರಾಕ್‌ಲೈನ್ ರವಿಕುಮಾರ್, ಡಾ.ಲೀಲಾವತಿ, ಡಾ.ಎಂ.ಜಿ.ಸಿದ್ದರಾಮಯ್ಯ,ನೌಕರರ ಸಂಘದ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಅವರುಗಳು ಡಾ.ಸಿ.ಸೋಮಶೇಖರ್ ಅವರನ್ನು ಬೆಂಬಲಿಸಿ ಮಾತನಾಡಿದರು.ಸುದ್ದಿಗೋಷ್ಠಿಯಲ್ಲಿ ಎಂ.ವಿ.ಬಸವರಾಜು,ಡಿ.ಎA.ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.