ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎರಡನೇ ವಾರ್ಡಿಗೆ ಸಂಬಂಧಿಸಿದ ದಾಖಲಾತಿಗಳ ಪರಿಶೀಲನೆಗಾಗಿ ಇಂದು ಗುರುವಾರ ಬೆಳಗ್ಗೆ ತುಮಕೂರು ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.
ಈ ದಾಳಿಯ ಮುಖಾಂತರ ಅವಶ್ಯಕ ದಾಖಲೆಗಳನ್ನು ಮತ್ತು ಕಡತಗಳನ್ನು ವಶಪಡಿಕೊಳ್ಳು ಈ ದಾಳಿ ನಡೆಸಲಾಗಿದೆ ಎಂದು ತಿಳದು ಬಂದಿದ್ದು, ಎರಡನೇ ವಾರ್ಡಿನ ವಿವಿಧ ದಾಖಲೆಗಳನ್ನು ನೀಡುವಂತೆ ತುಮಕೂರು ಲೋಕಾಯುಕ್ತರು ಮೂರು- ನಾಲ್ಕು ವರ್ಷಗಳಿಂದಕೇಳುತ್ತಿದ್ದರೂ ಸಹ, ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ದಾಖಲೆಗಳನ್ನು ಸಕಾಲಕ್ಕೆ ನೀಡದೆ ನಿರ್ಲಕ್ಷ್ಯ ವಹಿಸಿ ಅಸಡ್ಡೆ ತೋರಿದ್ದರು ಎಂದು ಹೇಳಲಾಗುತ್ತೊಇದೆ. ಈ ಹಿನ್ನೆಲೆಯಲ್ಲಿ ತಾವೇ ಖುದ್ದಾಗಿ ಮಹಾನಗರ ಪಾಲಿಕೆಯ ವಿವಿಧ ವಿಭಾಗಗಳಿಗೆ ದಾಳಿ ಮಾಡಿ ಸಂಬಂಧಪಟ್ಟ ದಾಖಲಾತಿಗಳನ್ನು ವಶಕ್ಕೆ ಪಡೆಯಲು ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಪಾಲಿಕೆಯ ವಿವಿಧ ವಿಭಾಗಗಳಲ್ಲಿ ದಾಖಲಾತಿಗಳಿಗಾಗಿ ಹುಡುಕಾಟ ನಡೆಸಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
ಬೆಳಗ್ಗೆ ದಾಳಿ ಮಾಡುವ ಮುಖಾಂತರ ಕಡತ ಪರಿಶೀಲನೆ ಆರಂಭಿಸಿರುವ ಈ ಕಾರ್ಯಾಚರಣೆಯ ನೇತೃತ್ವವನ್ನು ತುಮಕೂರು ಲೋಕಯುಕ್ತ ಎಸ್ ಪಿ ಮಲ್ಲೇಶ್ ವಹಿಸಿದ್ದು, ಲೋಕಾಯುಕ್ತ ಅಧಿಕಾರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.