LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

‘ನಾನಾ ಪಾಟೇಕರ್’ ಇನ್ನಿಲ್ಲ

ಅಭಿನಯ ಮತ್ತು ಜೀವನ ಶೈಲಿಯಿಂದ ದೇಶದ ಮನಗೆದ್ದ ನಟನಿಗೆ ಹೃದಯಾಘಾತ!

ತಮ್ಮದೇ ಆದ ವಿಭಿನ್ನ ಅಭಿನಯ, ತಾವು ನಿರ್ವಹಿಸಿದ ಪಾತ್ರ ಹಾಗೂ ಎಲ್ಲರಿಗೂ ಮಾದರಿಯಾಗುವಂತೆ ಸಾಧಾರಣವಾಗಿ ನೀವನ ನಡೆಸುತ್ತಿದ್ದ ಹಿರಿಯ ಹಾಗೂ ಖ್ಯಾತ ನಟ ನಾನಾ ಪಾಟೇಕರ್ (75) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

news_1791435138_1_916.webp

 

ಇಡೀ ಭಾರತೀಯ ಚಿತ್ರರಂಗವೇ ಆಘಾತ ವ್ಯಕ್ತಪಡಿಸಿ ಕಂಬನಿ ಮಿಡಿದಿದೆ. ಗೋವಾದ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ನಾನಾ ಪಾಟೇಕರ್‌ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿತ್ತು.  ವೈದ್ಯರು ಸಿಪಿಆರ್‌ ನೀಡುವ ಮೂಲಕ ಬದುಕಿಸಲು ಪ್ರಯತ್ನಿಸಿದರೂ ಯಾವುದೇ ಫಲಕಾರಿಯಾಗದೆ ಗುರುವಾರ ಬೆಳಗುನ ಜಾವ 5:20ಕ್ಕೆ ಕೊನೆಯುಸಿರೆಳೆದರೆಂದು ವೈದ್ಯರು ಹೇಳಿದರು.

ತಾವಿದ್ದ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಬಳಿಕ ಆಸ್ಪತ್ರೆಗೆ ಕರೆತಂದು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ನೀಡಿ ವೈದ್ಯರು ಹರಸಾಹಸಪಟ್ಟು. ವೈದ್ಯರ ಪ್ರಯತ್ನಕ್ಕೆ ಯಾವುದೇ ಸ್ಪಂದನೆ ನೀಡದ ನಾನಾಪಾಟೇಕರ್‌ ಅವರ ಆರೋಗ್ಯಸ್ಥಿತಿ ಅವರನ್ನು ಇಹಲೋಕಕ್ಕೆ ಕರೆದುಕೊಂಡು ಹೋಯಿತು.

news_1791435137_0_836.webp

ದೇಸದ ಪ್ರಖ್ಯಾತ ನಟರಲ್ಲಿ ಒಬ್ಬರಾಗಿದ್ದ ನಾನಾ ಪಾಟೇಕರ್ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಅತ್ಯದ್ಭುತ ನಟನೆಯ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು. ಪರಿಂದಾ,  ಕ್ರಾಂತಿವೀರ್, ಅಬ್ ತಕ್ ಛಪ್ಪನ್ ಮತ್ತು ವೆಲ್‌ಕಮ್ ಸಿರೀಸ್‌ ಚಿತ್ರಗಳು ಸೇರಿದಂತೆ ಹಲವು ಸಿನಿಮಾಗಳಲ್ಲಿನ ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ದೊರೆತಿತ್ತು.

ವಿಶ್ವನಾಥ್ ಪಾಟೇಕರ್ 1 ಜನವರಿ 1951ರಲ್ಲಿ ಜನಿಸಿದವರು. ಜನಪ್ರಿಯವಾಗಿ ನಾನಾ ಪಾಟೇಕರ್ ಎಂದೇ ಪರಿಚಿತರಾಗಿದ್ದರು. ಭಾರತೀಯ ಚಿತ್ರರಂಗದ ಅತ್ಯುತ್ತಮ ಹಾಗೂ ಪ್ರಭಾವಶಾಲಿ ನಟರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ನಾನಾ ಪಾಟೇಕರ್ ಅವರು ತಮ್ಮ ಅಭಿನಯಕ್ಕಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು, ಎರಡು ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದರು. ಚಿತ್ರರಂಗ ಮತ್ತು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 2013ರಲ್ಲಿ ಪದ್ಮಶ್ರೀ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದರು. ಅಂಗಾರ್ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ವಿಲನ್ ಪ್ರಶಸ್ತಿ ಪಡೆದರು. ಕ್ರಾಂತಿವೀರ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರ ಅಗ್ನಿಸಾಕ್ಷಿ (1996) ಚಿತ್ರದಲ್ಲಿನ ಅಭಿನಯಕ್ಕಾಗಿ ಮತ್ತೊಮ್ಮೆ ಅತ್ಯುತ್ತಮ ಪೋಷಕ ನಟನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು. ಅಪಹರಣ್ ಚಿತ್ರಕ್ಕಾಗಿ ಎರಡನೇ ಬಾರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ವಿಲನ್ ಪ್ರಶಸ್ತಿ ಪಡೆದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.2ರಿಂದ ಹೆಸರು ಕಾಳು ಖರೀದಿ ಕೇಂದ್ರ ಆರಂಭ!ವಿದ್ಯಾರ್ಥಿಗಳೊಂದಿಗೆ ಸಚಿವೆ ಶೋಭಾ ಕರಂದ್ಲಾಜೆ ಸಂವಾದಪಾವಗಡದಲ್ಲಿ ಬರ ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ಪರ್ಯಾಯ ವ್ಯವಸ್ಥೆ ಮಾಡದೆ ತುಮಕೂರಿನ ಹೆದ್ದಾರಿ ಬಂದ್ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ವಿಸಾಕಾ ಕಾರ್ಖಾನೆ ಮುಂದೆ ಬೃಹತ್‌ ಪ್ರತಿಭಟನೆ- Video ನೋಡಿಮೂಲಸೌಕರ್ಯ ಒದಗಿಸಲು ಆಗ್ರಹಿಸಿ ವಸತಿ ಶಾಲಾ ಮಕ್ಕಳ ಪ್ರತಿಭಟನೆಪಾವಗಡದಲ್ಲಿ ಟವರ್‌ ಹತ್ತಿ ಯುವತಿ ಆತ್ಮಹತ್ಯೆಗೆ ಯತ್ನ!ʼಕಲಬೆರಕೆ ರಹಿತ ಪೌಷ್ಠಿಕ ಆಹಾರ ಹಾಗೂ ಕಲಬೆರಕೆ ರಹಿತ ಔಷಧ ದೊರೆಯುವಂತಾಗಬೇಕುʼ- ಮುರಳೀಧರ ಹಾಲಪ್ಪಕೃಷಿ ಹೊಂಡಕ್ಕೆ ಬಿದ್ದ ಪತ್ನಿ ರಕ್ಷಿಸಲು ಹೋದ ಪತಿ; ಇಬ್ಬರೂ ನೀರುಪಾಲು!'ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ': ಸಿಪಿಐ ಮುಖಂಡ ಗಿರೀಶ್