ತುಮಕೂರಿನ ಬಿ.ಜಿ.ಎಸ್. ವೃತ್ತದಲ್ಲಿರುವ ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ವೈಭವಯುತವಾಗಿ ನಡೆಯುತ್ತಿದೆ.

ಹಿಂದೂ ಮಹಾಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮುಖೇನ ವಿವಿಧ ಮಠಾಧೀಶರು ಚಾಲನೆ ನೀಡಿದರು. ಮಾಜಿ ಸಚಿವ ಸೊಗಡು ಶಿವಣ್ಣ, ಟಿ.ಬಿ. ಶೇಖರ್, ಸ್ಪೂರ್ತಿ ಚಿದಾನಂದ್, ಮಂಜು ಭಾರ್ಗವ, ಟಿ.ವೈ.ಯಶಸ್, ಮುಖಂಡರಾದ ಮೋಹನ್‌ಕುಮಾರ್ ಪಟೇಲ್, ಸಿ.ಆರ್.ಮೋಹನ್‌ಕುಮಾರ್, ಧನಿಯಾಕುಮಾರ್, ಗೋಕುಲ ಮಂಜುನಾಥ್, ಶೀತಕಲ್ ಕೃಷ್ಣಯ್ಯ, ಡಿ.ಭಾನುಪ್ರಕಾಶ್, ರವಿಕುಮಾರ್, ಪರಮೇಶ್, ಬಸವಕುಮಾರ್, ಮಂಜೇಶ್, ಮಹೇಂದ್ರಕುಮಾರ್, ವಸಂತಕುಮಾರ್, ದಿವಾಕರ್ ನಾಯ್ಡು, ಮಧು, ಸೌಮ್ಯ ಮತ್ತಿತರರು ಭಾಗವಹಿಸಿದ್ದರು.

ಹಲವಾರು ಸಾಂಸ್ಕೃತಿಕ ತಂಡಗಳು ಮೆರವಣಿಗೆಯ ವೈಭವವನ್ನು ಹೆಚ್ಚಿಸಿದ್ದು, ಸಾವಿರಾರು ಭಕ್ತರು ಈ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಬಹುದೊಡ್ಡ ಮೆರವಣಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತು ನೀಡಲಾಗಿದ್ದು, ನಗರದಲ್ಲಿನ ವಾಹನ ಸಂಚಾರಕ್ಕೆ ಅಡೆತಡೆಯಾಗದಂತೆ ಮಾರ್ಗ ದಲಾವಣೆಗಳನ್ನು ನೀಡಿ ಸಂಚಾರಿ ಪೊಲೀಸರು ನಿರ್ವಹಿಸುತ್ತಿದ್ದಾರೆ.
