LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜೆಡಿಎಸ್ ಕಾರ್ಯಕರ್ತರ ಮೇಲೆ  ಸುಳ್ಳು ಕೇಸ್‌ ದಾಖಲು ನಿಲ್ಲಿಸಿ

ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಮಾಜಿ ಶಾಸಕ ಕೆ. ಎಂ. ತಿಮ್ಮರಾಯಪ್ಪ ಆಕ್ರೋಶ

- ಸತ್ಯ ಲೋಕೇಶ್‌, ಪಾವಗಡ

ಪಾವಗಡ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು, ಪಟ್ಟಣದ ಎಸ್.ಎಸ್. ಕೆ.ಬಯಲು  ರಂಗಮಂದಿರದಿಂದ ಹೊರಟು ಪ್ರತಿಭಟನಾ ರ್ಯಾಲಿ ಬಳ್ಳಾರಿ ರಸ್ತೆ ಮೂಲಕ ಪೆನುಗೊಂಡೆ ರಸ್ತೆ ಮಾರ್ಗದಲ್ಲಿರುವ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಜೆ.ಇ.ಕೃಷ್ಣಮೂರ್ತಿ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿ, ಗ್ರಾಮಾಂತರ ಪ್ರದೇಶದ ರೈತರ ಹೂಲಗಳಿಗೆ ನಿತ್ಯ 7 ಗಂಟೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಬೇಕೆಂದು ಒತ್ತಾಯಿಸಲಾಯಿತು.

 ಇಡಿ ದೇಶಕ್ಕೆ ಅತಿ ದೊಡ್ಡದಾದ ಸೋಲಾರ್ ಪಾರ್ಕ್‌ ಹೊಂದಿ ಅದರಿಂದ ವಿದ್ಯುತ್‌ಉತ್ಪಾದನೆ ಮಾಡುವ ತಾಲೂಕಾಗಿದೆ. ಆದರೆ ತಾಲೂಕು ಮಾತ್ರ ಕತ್ತಲಲ್ಲಿ ಮುಳುಗಿದೆ ಎಂದು  ಜೆ ಡಿ ಎಸ್ ಮತ್ತು ಬಿ ಜೆ ಪಿ ಕಾರ್ಯಕರ್ತರು  ಕೆಂಡಮಂಡಲರಾದರು, ಈ ವೇಳೆ ಮನವಿಯನ್ನ ಸ್ವೀಕರಿಸಿ ಜೆ ಈ ಕೃಷ್ಣಮೂರ್ತಿ ಮಾತನಾಡಿ ನಿಮ್ಮೆಲ್ಲ ಬೇಡಿಕೆಗಳನ್ನು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನ ಬಗೆಹರಿಸಿ ಕೊಡಲಾಗುವುದು ಎಂದು ಭರವಸೆಯನ್ನು ನೀಡಿದರು.

 ನಂತರ ಅಲ್ಲಿಂದ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ತಹಸೀಲ್ದಾರ್ ವೈ.ರವಿ ಅವರಿಗೆ  ಮನವಿಯನ್ನ ಸಲ್ಲಿಸಲಾಯಿತು. ಈ ವೇಳೆ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಒತ್ತಾಯಿಸಿ, ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳಿಂದ ಪಾವಗಡ ತಾಲೂಕಿಗೆ ಕೂಡಲೇ ನೀರು ಹರಿಸಬೇಕು ಮತ್ತು ಜನತಾದಳ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ಸುಳ್ಳು ಕೇಸುಗಳನ್ನು ದಾಖಲಿಸುತ್ತಿರುವುದನ್ನು ನಿಲ್ಲಿಸಬೇಕು, ರಾಜ್ಯದಲ್ಲಿ ಗುಟ್ಕಾ ನಿಷೇಧದಿಂದಾಗಿ ರೈತರಿಂದ ವರ್ತಕರು ಅಡಿಕೆಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದು ಗುಟ್ಕಾ ನಿಷೇಧವನ್ನು ಸರ್ಕಾರ ಹಿಂಪಡೆಯಬೇಕು, ಸುಮಾರು 6. ತಿಂಗಳಿಂದ ಮಾಶಾಸವನ್ನು ನಿಲ್ಲಿಸಿದ್ದು ಇದರಿಂದ ವೃದ್ಧರು, ಅಂಗವಿಕಲರು, ವಿಧವೆಯರು, ಸಂಧ್ಯಾ ಸುರಕ್ಷಾ ಪಡೆಯುತ್ತಿರುವರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಆದ್ದರಿಂದ ಕೂಡಲೇ ಮಾನವೀಯ ದೃಷ್ಟಿಯಿಂದ ಮಾಶಾಸನವನ್ನು ಬಿಡುಗಡೆ ಮಾಡಬೇಕು, ಪಾವಗಡ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿದ್ದು ಕೂಡಲೇ ಮೇವು ಬ್ಯಾಂಕ್ ಪ್ರಾರಂಭಿಸಿ, ಗೋಶಾಲೆಗಳನ್ನು ತೆರೆಯಬೇಕು, ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದು, ಸರ್ಕಾರ ಜಾಣ ಕುರುಡನಂತೆ ವರ್ತಿಸುತ್ತಿದ್ದು ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಿಸಬೇಕು, ಕೆ. ವೈ. ಸಿ. ಇಂದ ಪಡಿತರ ಚೀಟಿದಾರರು  ಅನುಭವಿಸುತ್ತಿರುವ ಸರ್ವರ್ ಸಮಸ್ಯೆಯನ್ನು ನಿವಾರಿಸಬೇಕು ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಈ. ಖಾತೆಗಳನ್ನು ಮಾಡಲು ವಿಳಂಬ ನೀತಿ ಅನುಸರಿಸುತ್ತಿದ್ದು, ಪಾವಗಡ ಟೌನ್ ನಲ್ಲಿ ಲ್ಯಾಂಡ್ ಅರ್ಮಿ ವತಿಯಿಂದ ಮಾಡುತ್ತಿರುವ ಕಳಪೆ ಕಾಮಗಾರಿಗಳನ್ನು ತನಿಖೆ ಮಾಡಿಸಬೇಕು, ಪಾವಗಡ ಸೋಲಾರ್ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಬೇಕು, ಪಾವಗಡ ಜೂನಿಯರ್ ಕಾಲೇಜ್ ಮೈದಾನದಲ್ಲಿ ವಾಕಿಂಗ್ ಪಾರ್ಕ್ ನಿರ್ಮಾಣ ಕಾಮಗಾರಿ ನಿಲ್ಲಿಸಬೇಕು ಮತ್ತು ಕ್ರೀಡಾಪಟುಗಳಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.

 ಈ ವೇಳೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ದೊಡ್ಡ ಹಳ್ಳಿ ಅಶೋಕ್ ಮುಖಂಡ ಗಿರೀಶ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎನ್. ತಿಮ್ಮಾರೆಡ್ಡಿ, ಜೆಡಿಎಸ್ ಜಿಲ್ಲಾ ಮಾಜಿ ಅಧ್ಯಕ್ಷ ಆರ್. ಸಿ. ಅಂಜನಪ್ಪ, ಮತ್ತಿತರರು ಮಾತನಾಡಿದರು.  ಈ ವೇಳೆ ಜೆಡಿಎಸ್ ಮುಖಂಡರಾದ ಸೊಗಡು ವೆಂಕಟೇಶ್, ತಾ ಅಧ್ಯಕ್ಷ ಎನ್. ಎ. ಈರಣ್ಣ, ಮಾಜಿ ಅಧ್ಯಕ್ಷ ಬಲರಾಮರೆಡ್ಡಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಗೋವಿಂದ ಬಾಬು, ನಗರ ಘಟಕದ ಅಧ್ಯಕ್ಷ ಗಡ್ಡಂ ತಿಮ್ಮರಾಜು, ಮಹಿಳಾ ಮುಖಂಡರಾದ ಅಂಬಿಕಾ ಶಕುಂತಲಾ, ಅಕ್ಕಲಪ್ಪ ನಾಯ್ಡು ಕೆಂಚಗಾನಹಳ್ಳಿ ಗೋವಿಂದಪ್ಪ,  ಗೋಪಾಲ್, ಜಿ.ಎ.ವೆಂಕಟೇಶ್  ಬಿಜೆಪಿ ಮುಖಂಡರಾದ ರವಿ, ಸೂರ್ಯನಾರಾಯಣ್, ಮತ್ತಿತರ ನೂರಾರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.2ರಿಂದ ಹೆಸರು ಕಾಳು ಖರೀದಿ ಕೇಂದ್ರ ಆರಂಭ!ವಿದ್ಯಾರ್ಥಿಗಳೊಂದಿಗೆ ಸಚಿವೆ ಶೋಭಾ ಕರಂದ್ಲಾಜೆ ಸಂವಾದಪಾವಗಡದಲ್ಲಿ ಬರ ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ಪರ್ಯಾಯ ವ್ಯವಸ್ಥೆ ಮಾಡದೆ ತುಮಕೂರಿನ ಹೆದ್ದಾರಿ ಬಂದ್ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ವಿಸಾಕಾ ಕಾರ್ಖಾನೆ ಮುಂದೆ ಬೃಹತ್‌ ಪ್ರತಿಭಟನೆ- Video ನೋಡಿಮೂಲಸೌಕರ್ಯ ಒದಗಿಸಲು ಆಗ್ರಹಿಸಿ ವಸತಿ ಶಾಲಾ ಮಕ್ಕಳ ಪ್ರತಿಭಟನೆಪಾವಗಡದಲ್ಲಿ ಟವರ್‌ ಹತ್ತಿ ಯುವತಿ ಆತ್ಮಹತ್ಯೆಗೆ ಯತ್ನ!ʼಕಲಬೆರಕೆ ರಹಿತ ಪೌಷ್ಠಿಕ ಆಹಾರ ಹಾಗೂ ಕಲಬೆರಕೆ ರಹಿತ ಔಷಧ ದೊರೆಯುವಂತಾಗಬೇಕುʼ- ಮುರಳೀಧರ ಹಾಲಪ್ಪಕೃಷಿ ಹೊಂಡಕ್ಕೆ ಬಿದ್ದ ಪತ್ನಿ ರಕ್ಷಿಸಲು ಹೋದ ಪತಿ; ಇಬ್ಬರೂ ನೀರುಪಾಲು!'ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ': ಸಿಪಿಐ ಮುಖಂಡ ಗಿರೀಶ್