LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

’ದಸರಾ ಖರ್ಚಿನ ಲೆಕ್ಕ ಕೊಡಿ’ ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಪ್ರತಿಭಟನೆ

2 ವರ್ಷದ ಉತ್ಸವದಲ್ಲಿ ಕೊಟ್ಯಾಂತರ ರೂ. ಅವ್ಯವಹಾರದ ಆರೋಪ

ತುಮಕೂರು: ಜಿಲ್ಲಾಡಳಿತ ಎರಡು ವರ್ಷ ತುಮಕೂರಿನಲ್ಲಿ ನಡೆಸಿದ ದಸರಾ ಉತ್ಸವದ ಖರ್ಚು ವೆಚ್ಚದ ಲೆಕ್ಕ ಕೊಡಿ, ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಒತ್ತಾಯಿಸಿ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಮುಖಂಡರು ಶುಕ್ರವಾರ ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ಮಾಡಿ ಹಕ್ಕೊತ್ತಾಯ ಮಾಡಿದರು.

ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜು ಮಾತನಾಡಿ, ಜಿಲ್ಲಾಡಳಿತವು  ಜನರ ಹಣ ಬಳಸಿಕೊಂಡು ತುಮಕೂರಿನಲ್ಲಿ ಎರಡು ವರ್ಷ ದಸರಾ ಉತ್ಸವ ನಡೆಸಿದೆ. ಇದಕ್ಕಾಗಿ ಸುಮಾರು 6-7 ಕೋಟಿ ರೂ. ಖರ್ಚು ಮಾಡಲಾಗಿದೆ. ಯಾವುದೇ ನಿಯಮಗಳನ್ನು ಪಾಲನೆ ಮಾಡದೆ, ಕೋಟ್ಯಾಂತರ ರೂ. ಖರ್ಚು ಮಾಡಿದ್ದು, ಸಾರ್ವಜನಿಕರ ಹಣ ಕೋಟ್ಯಾಂತರ ರೂ. ಅವ್ಯವಹಾರ ಮಾಡಲಾಗಿದೆ. ಜನರ ದುಡ್ಡಿನಿಂದ ದಸರಾ ಮಾಡಿದ ಖರ್ಚು ವೆಚ್ಚವನ್ನು ಜನರ ಮುಂದಿಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಲೆಕ್ಕ ಕೊಡುವವರೆಗೂ ’ದಸರಾ ಉತ್ಸವದ ಖರ್ಚು, ವೆಚ್ಚಗಳ ಲೆಕ್ಕ ಕೊಡಿ’ ಎಂಬ ಅಭಿಯಾನ ಮುಂದುವರೆಸಲಾಗುವುದು. ಲೆಕ್ಕ ಕೊಡದೆ ಈ ವರ್ಷದ ದಸರಾ ಉತ್ಸವ ಮಾಡಕೂಡದು. ದಸರಾ ಉತ್ಸವ ಸಂಬಂಧ ನಗರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲವಾಗಿ ಅಧಿಕಾರಿಗಳ ಪ್ರಭುತ್ವ ಕಂಡುಬಂದಿದೆ. ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸಿದ್ದಾರೆ. ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೋರಿದ್ದು, ಅವ್ಯವಹಾರ ಮಾಡುವ ಉದ್ದೇಶದಿಂದಲೇ ದಸರಾ ಉತ್ಸವ ಮಾಡಲಾಗುತ್ತಿದೆ ಎಂಬ ಅನುಮಾನ ಬಂದಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಿಂದ ಪಡೆದ ಅಧಿಕೃತ ದಾಖಲೆಗಳ ಪ್ರಕಾರ ಎಂದು 2.58ಕೋಟಿ ರೂ. ಜಿಲ್ಲಾಧಿಕಾರಿ ಖಾತೆಗೆ ಬಂದಿದ್ದು, ೫೬ ಚೆಕ್ ಮೂಲಕ 2.36 ಕೋಟಿ ರೂ. ಖರ್ಚು ಮಾಡಿದ್ದು 22 ಲಕ್ಷ ಉಳಿಸಲಾಗಿದೆ. ಖರ್ಚಿಗೆ ಸಂಬಂಧಪಟ್ಟ ಯಾವುದೇ ರಸೀದಿ, ವೋಚರ್, ಬಿಲ್, ಕೋಟೇ?ನ್ ದಾಖಲೆಗಳಿಲ್ಲ. ತಹಸೀಲ್ದಾರರಿಗೆ ೫ ಚೆಕ್ ಮೂಲಕ 46.50 ಲಕ್ಷ ನೀಡಿದ್ದು ಈ ಖರ್ಚಿನ ಬಗ್ಗೆಯೂ ದಾಖಲೆಗಳಿಲ್ಲ, ತೋಟಗಾರಿಕೆ ಇಲಾಖೆ ಪಡೆದ 35 ಲಕ್ಷ ರೂ. ದಾಖಲೆಗಳಿಲ್ಲ. ಸರ್ಕಾರದಿಂದ 1.50 ಕೋಟಿ ರೂ. ಬಿಡುಗಡೆಯಾಗಿದ್ದು ಈ ಹಣದ ಬಗ್ಗೆಯೂ ದಾಖಲೆಗಳಿಲ್ಲ, ಮಹಾನಗರ ಪಾಲಿಕೆ ದಸರಾ ಮುಗಿದು ಒಂದು ತಿಂಗಳ ನಂತರ ಡಿಸಿ ಖಾತೆಗೆ 50 ಲಕ್ಷ ರೂ. ನಗದು ಜಮಾ ಮಾಡಲಾಗಿದೆ. ಒಟ್ಟು 2 ಕೋಟಿ ರೂ. ಗಳ ಖರ್ಚು, ವೆಚ್ಚದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಜಿ.ಎಸ್. ಬಸವರಾಜು ಹೇಳಿದರು.

ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಉಪಾಧ್ಯಕ್ಷ ಜಿ.ಕೆ. ಶ್ರೀನಿವಾಸ್, ಮುಖಂಡರಾದ ಬಿ.ಆರ್.ವಿಜಯಕುಮಾರ್, ಶೃತಿ, ಸಿದ್ಧರಾಜು, ಉದಯಸಿಂಹ, ದಯಾನಂದ್, ಸತ್ಯಪ್ರಸಾದ್, ಪುಟ್ಟರುದ್ರಯ್ಯ, ಕಲ್ಪನಾ ಪ್ರಸಾದ್, ಕಿರಣ್, ಎಸ್.ಆರ್. ಪ್ರಸಾದ್, ಡಾ. ಫರ್ಜಾನಾ, ವಿಜಯ ರವೀಂದ್ರ, ಗೋಪಾಲಕೃಷ್ಣ, ಭಾಸ್ಕರಾಚಾರ್, ಆನಂದಬಾಬು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.2ರಿಂದ ಹೆಸರು ಕಾಳು ಖರೀದಿ ಕೇಂದ್ರ ಆರಂಭ!ವಿದ್ಯಾರ್ಥಿಗಳೊಂದಿಗೆ ಸಚಿವೆ ಶೋಭಾ ಕರಂದ್ಲಾಜೆ ಸಂವಾದಪಾವಗಡದಲ್ಲಿ ಬರ ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ಪರ್ಯಾಯ ವ್ಯವಸ್ಥೆ ಮಾಡದೆ ತುಮಕೂರಿನ ಹೆದ್ದಾರಿ ಬಂದ್ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ವಿಸಾಕಾ ಕಾರ್ಖಾನೆ ಮುಂದೆ ಬೃಹತ್‌ ಪ್ರತಿಭಟನೆ- Video ನೋಡಿಮೂಲಸೌಕರ್ಯ ಒದಗಿಸಲು ಆಗ್ರಹಿಸಿ ವಸತಿ ಶಾಲಾ ಮಕ್ಕಳ ಪ್ರತಿಭಟನೆಪಾವಗಡದಲ್ಲಿ ಟವರ್‌ ಹತ್ತಿ ಯುವತಿ ಆತ್ಮಹತ್ಯೆಗೆ ಯತ್ನ!ʼಕಲಬೆರಕೆ ರಹಿತ ಪೌಷ್ಠಿಕ ಆಹಾರ ಹಾಗೂ ಕಲಬೆರಕೆ ರಹಿತ ಔಷಧ ದೊರೆಯುವಂತಾಗಬೇಕುʼ- ಮುರಳೀಧರ ಹಾಲಪ್ಪಕೃಷಿ ಹೊಂಡಕ್ಕೆ ಬಿದ್ದ ಪತ್ನಿ ರಕ್ಷಿಸಲು ಹೋದ ಪತಿ; ಇಬ್ಬರೂ ನೀರುಪಾಲು!'ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ': ಸಿಪಿಐ ಮುಖಂಡ ಗಿರೀಶ್