ತುಮಕೂರು: ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ರಾಧಾಕೃಷ್ಣ ಬಿ.ಆರ್. ಅವರು “ರೇರ್ ಅರ್ಥ್ ಆ್ಯಂಡ್ ಟ್ರಾನ್ಸಿಷನ್ ಮೆಟಲ್ ಐಯಾನ್ಸ್ ಡೋಪ್ಡ್ ಫಾಸ್ಫರ್ಸ್ ಫಾರ್ ಮಲ್ಟಿಫಂಕ್ಷನಲ್ ಅಪ್ಲಿಕೇಷನ್ಸ್” ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಭೌತಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಗಿದೆ.
ಹಿರಿಯೂರು ತಾಲ್ಲೂಕಿನ ಬೇತೂರಿನ ಡಿ. ರಂಗಸ್ವಾಮಿ ಹಾಗೂ ಕೆ. ಇಂದ್ರಮ್ಮ ದಂಪತಿಯ ಪುತ್ರರಾದ ರಾಧಾಕೃಷ್ಣ ಬಿ.ಆರ್. ಅವರು ತುಮಕೂರು ವಿವಿಯ ಭೌತಶಾಸ್ತ್ರ ವಿಭಾಗದ ಅಧ್ಯಕ್ಷರು ಹಾಗೂ ಕುಲಪತಿಗಳಾದ ಪ್ರೊ. ಎಚ್. ನಾಗಭೂಷಣ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು.
ಸಂಶೋಧನೆಯಲ್ಲಿ ರೇರ್ ಅರ್ಥ್ ಹಾಗೂ ಟ್ರಾನ್ಸಿಷನ್ ಮೆಟಲ್ ಐಯಾನ್ಸ್ ಡೋಪ್ ಮಾಡಿದ ಫಾಸ್ಫರ್ಗಳ ತಯಾರಿಕೆ ಹಾಗೂ ಅವುಗಳ ವಿವಿಧ ಗುಣಲಕ್ಷಣಗಳನ್ನು ಅಧ್ಯಯನ ಮಾಡಲಾಗಿದೆ. ವಿಶೇಷವಾಗಿ, ಈ ಫಾಸ್ಫರ್ಗಳಿಂದ ಫಿಂಗರ್ಪ್ರಿಂಟ್ ಡಿಟೆಕ್ಷನ್, ಆ್ಯಂಟಿ-ಕೌಂಟರ್ಫೀಟಿಂಗ್, ಯು.ವಿ. ಬ್ಲಾಕಿಂಗ್ ಹಾಗೂ ಸೂಪರ್ಕೆಪಾಸಿಟರ್ಸ್ ಅಪ್ಲಿಕೇಷನ್ಸ್ ಕುರಿತು ಸಂಶೋಧನೆ ನಡೆಸಿದ್ದಾರೆ. ರಾಧಾಕೃಷ್ಣ ಬಿ.ಆರ್. ಅವರು 100 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ.
ಇತ್ತೀಚೆಗೆ, “ಪ್ರೊಸೆಸ್ ಫಾರ್ ಸಿಂಥಸೈಸಿಂಗ್ ಯುರೋಪಿಯಂ-ಡೋಪ್ಡ್ ಸ್ಟ್ರಾಂಷಿಯಂ ಮೆಗ್ನೀಷಿಯಂ ಜರ್ಮನೇಟ್ ಫಾಸ್ಫರ್ಸ್” ಎಂಬ ಆವಿಷ್ಕಾರಕ್ಕಾಗಿ ಯುನೈಟೆಡ್ ಸ್ಟೇಟ್ಸ್ ಪೇಟೆಂಟ್ ಕೂಡ ಪಡೆದಿದ್ದಾರೆ. ಪಿಎಚ್.ಡಿ. ಪದವಿ ಪಡೆದ ರಾಧಾಕೃಷ್ಣ ಬಿ.ಆರ್. ಅವರಿಗೆ ಕುಟುಂಬದವರು, ವಿವಿಯ ಪ್ರಾಧ್ಯಾಪಕರು, ಸಂಶೋಧನಾ ಸಹೋದ್ಯೋಗಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.