ಮಧುಗಿರಿ: ಗ್ರಾಮೀಣ ಭಾಗದ ಮಕ್ಕಳು ಬುದ್ಧಿವಂತಿಕೆಯಲ್ಲಿ ಯಾರಿಗಿಂತಲೂ ಕಡಿಮೆ ಇಲ್ಲ, ದೊರೆತ ಅವಕಾಶಗಳನ್ನು ಉಪಯೋಗಿಸಿ ಕೊಳ್ಳಬೇಕು ಎಂದು ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ಶ್ರೀರಂಗನಾಥ ಗ್ರಾಮಾಂತರ ಪ್ರೌಢಶಾಲೆ ನೇರಳೆಕೆರೆಯಲ್ಲಿ 1999 -2,000 ಮೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರು ವಂದನ ಸಮಾರಂಭದಲ್ಲಿ ದಿವ್ಯಸಾ ನಿದ್ಯಾ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು ಗ್ರಾಮೀಣ ಭಾಗದ ಮಕ್ಕಳು ಕೇಳಿರಿಮೆಯನ್ನು ತೊರೆದು ಶಿಕ್ಷಕರು ಕಲಿಸಿದ ಪಾಠವನ್ನು ಅರ್ಥೈಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ನೇರಳೆ ಕೆರೆಯಂತಹ ಗ್ರಾಮದಲ್ಲಿ ದೊರೆತ ಅವಕಾಶಗಳನ್ನು ಬಳಸಿಕೊಂಡು ಐಎಎಸ್ ನಂತಹ ಸರ್ಕಾರದ ಉನ್ನತ ಹುದ್ದೆಗೆ ಏರಿದ ಶ್ರೀಮತಿ ಸತ್ಯಭಾಮ ಐಎಎಸ್, ಡಿವೈಎಸ್ಪಿ ಎಂ ಪಾಷ ಮತ್ತಿತರರು ನಿಮ್ಮ ಗ್ರಾಮದವರೇ ಆಗಿದ್ದು ಅವರುಗಳನ್ನು ಆದರ್ಶವಾಗಿಟ್ಟುಕೊಂಡು ಉನ್ನತ ಶಿಕ್ಷಣ ಪಡೆಯುವಂತೆ ಆಶೀರ್ವದಿಸಿದರು.
ಗೌರವ ಸ್ವೀಕರಿಸಿದವರಲ್ಲಿ ಒಬ್ಬರಾದ ನಿವೃತ್ತ ಮುಖ್ಯ ಶಿಕ್ಷಕ ಹನುಮಣ್ಣ ಮಾತನಾಡಿ ಕಲಿತ ಶಾಲೆ ಹಾಗೂ ಶಿಕ್ಷಕರನ್ನು ಗೌರವಿಸುವಂತಹ ಸಂಸ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸಿ ಜನ್ಮ ನೀಡಿದ ಹಾಗೂ ನಿಮ್ಮ ಭವಿಷ್ಯಕ್ಕೆ ಕಾರಣರಾದ ಪೋಷಕರನ್ನು ವಯಸ್ಸಾದ ಕಾಲದಲ್ಲಿ ಗೌರವದಿಂದ ಕಾಣಿರಿ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಶ್ರೀಮತಿ ಸತ್ಯಭಾಮ ಐಎಎಸ್ ಪ್ರಸ್ತುತ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಎಂ ಡಿ, ನಿವೃತ್ತ ಡಿವೈಎಸ್ಪಿ ಎಂ ಪಾಷಾ, ಆಡಿಟರ್ ಗುರು ಲಿಂಗಯ್ಯ , ಇತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರುಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.