ಬೆಂಗಳೂರು: ಕರ್ನಾಟಕದ ಗ್ರಾಮೀಣ ಭಾಗದ ರಾಜೀಕಯ ಚಟುವಟಿಗೆ ಬಿರುಸು ಸಿಕ್ಕಿದೆ. ಚುನಾವಣೆ ಆಗದೆ ಮುಹೂರ್ತಕ್ಕಾಗಿ ಕಾಯುತ್ತಿದ್ದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ಅಂತಿಮ ಮೀಸಲಾತಿ ಟ್ಟಿಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.
ಕ್ಷೇತ್ರವಾರು ವರ್ಗವಾರು ಅಂತಿಮ ಮೀಸಲಾತಿ ನಿಗದಿಪಡಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯಪತ್ರ ಅಧಿಸೂಚನೆ ನೀಡಿದೆ. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮಾವಳಿಗಳು ಹಾಗೂ ಪ್ರಕರಣ 162ರ ಅಡಿಯಲ್ಲಿ ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಹಳೆಯ ಅಧಿಸೂಚನೆಗಳನ್ನು ರದ್ದುಗೊಳಿಸಿ ನೀತನ ಪಟ್ಟಿಯನ್ನು ಈಗ ಪ್ರಕಟಿಸಿದೆ.
ಒಟ್ಟು 1,129 ಸ್ಥಾನಗಳಲ್ಲಿ ಮಹಿಳೆಯರಿಗೆ 571 ಸ್ಥಾನ ಮೀಸಲಿಟ್ಟು ಸಕಾರ ಸಾಮಾಜಿಕ ನ್ಯಾಯ ಮೆರೆದಿದೆ. ಮಹಿಳೆಯರಿಗೆ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಈ ಹೊಸ ಪಟ್ಟಿಯಲ್ಲಿ ಮೀಸಲಿರಿಸಿದೆ.
ಅನುಸೂಚಿತ ಜಾತಿ (SC): 225 ಸ್ಥಾನ ( 121 ಸ್ಥಾನ ಮಹಿಳೆಯರಿಗೆ)
ಅನುಸೂಚಿತ ಪಂಗಡ (ST): 102 ಸ್ಥಾನ ( 59 ಸ್ಥಾನ ಮಹಿಳೆಯರಿಗೆ)
ಹಿಂದುಳಿದ ವರ್ಗ ‘ಅ’ (BC-A): 183 ಸ್ಥಾನ ( 98 ಸ್ಥಾನ ಮಹಿಳೆಯರಿಗೆ)
ಹಿಂದುಳಿದ ವರ್ಗ ‘ಬ’ (BC-B): 43 ಸ್ಥಾನ ( 25 ಸ್ಥಾನ ಮಹಿಳೆಯರಿಗೆ)
ಸಾಮಾನ್ಯ ವರ್ಗ (General): 576 ಸ್ಥಾನ ( 268 ಸ್ಥಾನ ಮಹಿಳೆಯರಿಗೆ)
ಜಿ.ಪಂ., ತಾಪಂ.ಗಳಿಗೆ ಈಗ ಅಂತಿಮ ಮೀಸಲಾತಿ ಪ್ರಕಟವಾಗಿದ್ದು, ಸಧ್ಯದಲ್ಲೇ ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಘೋಷಿಸುವ ಸೂಚನೆ ಸಿಕ್ಕಿದೆ. ಗ್ರಾಮೀಣ ಭಾಗದ ರಾಜಕೀಯ ಅಖಾಡ ಬಿರುಸಿನಿಂದ ಆರಂಭವಾಗಿದ್ದು, ಹೊಸ ಚೈತನ್ಯದೊಂದಿಗೆ ರಾಜಕೀಯ ರಂಗು ಪಡೆಯುತ್ತಿದೆ.