- ಸತ್ಯ ಲೋಕೇಶ್ ಪಾವಗಡ
ಪಾವಗಡ : ಪಾವಗಡ ಪಟ್ಟಣದಲ್ಲಿ ತುಮಕೂರು ರಸ್ತೆ, ಶಿರಾ ರಸ್ತೆ, ಹಿಂದೂಪುರ ರಸ್ತೆ, ಹೊಸ ಬಸ್ ನಿಲ್ದಾಣ ಹಾಗೂ ಶನಿಮಹಾತ್ಮ ದೇವಸ್ಥಾನದ ಪಕ್ಕದ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ವಾಹನ ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ ಆದರೂ ಸಹ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆಯವರು ಇದಕ್ಕೂ ನಮಗೂ ಯಾವುದೇ ರೀತಿಯ ಸಂಬಂಧ ಇಲ್ಲವೇನೋ ಎಂಬಂತೆ ವರ್ತಿಸುತ್ತಾ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಎಸ್. ಎಸ್. ಕೆ. ಸಮುದಾಯ ಭವನ ಮುಂಭಾಗದ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಅತಿ ಹೆಚ್ಚು ವಾಹನಗಳು ಸಂಚರಿಸುವ ರಸ್ತೆಯಾದ ಯೂನಿಯನ್ ಬ್ಯಾಂಕ್ ಮುಂಭಾಗ ಟಾರ್ ರಸ್ತೆಯು ಗುಂಡಿಗಳಿಂದ ಕೂಡಿದ್ದು ಹಾಗೂ ಕಲ್ಲು ಮಣ್ಣುಗಳಿಂದ ದ್ವಿಚಕ್ರ ವಾಹನ ಆಯತಪ್ಪಿ ಪ್ರತಿನಿತ್ಯ ಸವಾರರು ಕೆಳಗೆ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ,
ಮೊನ್ನೆ ಪಟ್ಟಣದ ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್ ತಮ್ಮ ಸ್ಕೂಟಿಯಲ್ಲಿ ಹೋಗುವಾಗ ಇದೇ ಸ್ಥಳದಲ್ಲಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ, ಅವರು ಈ ಸಂಬಂಧ ಪುರಸಭೆಯ ವಿರುದ್ಧ ಪಾವಗಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಇನ್ನು ಶಿರಾ ರಸ್ತೆಯ ಮಾರ್ಗದ ದೇವಲಕೆರೆ ಕ್ರಾಸ್ ಬಳಿ, ಗುಂಡಿಗಳು ಇರುವುದರಿಂದ ಮತ್ತು ಎಲ್ಲಿಯೂ ಹಂಪ್ಸ್ ಇಲ್ಲದಿರುವುದರಿಂದ ಬೈಕ್ ಸವಾರರು ಸ್ಥಳದಲ್ಲಿ ಮರಣ ಹೊಂದಿರುವ ಘಟನೆ ಜರುಗಿದೆ,
ವೆಂಕಟರಮಣಪ್ಪ ಎನ್ನುವ 63 ವರ್ಷದ ವಯೋವೃದ್ಧರು ತಮ್ಮ ಸ್ಕೂಟಿಯಲ್ಲಿ ಹೋಗುವಾಗ ಎದುರಿನಿಂದ ಬಂದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಅವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ,
ಇನ್ನೂ ಇದೇ ರಸ್ತೆಯ ಮಾರ್ಗದಲ್ಲಿ 65 ವರ್ಷದ ಮುಕುಂದಪ್ಪ ತಮ್ಮ ಸ್ಕೂಟಿಯಲ್ಲಿ ಸಂಚರಿಸುವಾಗ ರಸ್ತೆ ತಿರುವಿನಲ್ಲಿ ಅತಿ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ ಹೊಡೆದ್ದರಿಂದ ಮುಕುಂದಪ್ಪ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ, ಅಲ್ಲದೆ ದೇವಲಕೆರೆ ಕ್ರಾಸ್ ಬಳಿ ಯಾವುದೇ ರೀತಿಯಾದಂತಹ ಮಾರ್ಗ ಸೂಚನಾ ಫಲಕಗಳು ಇಲ್ಲದೆ ಹಾಗೂ ರಸ್ತೆ ಉಬ್ಬುಗಳು ಇಲ್ಲದೆ ಇರುವುದರಿಂದ ನಿತ್ಯ ಅಪಘಾತಗಳಾಗುತ್ತಿವೆ
ರಾಜ್ಯದಲ್ಲಿ ಸುಪ್ರಸಿದ್ಧ ಶನಿಮಹಾತ್ಮ ದೇವಸ್ಥಾನ ಇದ್ದು ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ,, ಶನಿದೇವರ ದೇವಸ್ಥಾನ ಪಕ್ಕದಲ್ಲಿ ಹೋಗುವ ಮಾರ್ಗ ಮಧ್ಯದಲ್ಲಿ ಗುಂಡಿಗಳು ಬಿದ್ದಿವೆ ಸಾಕಷ್ಟು ಬಾರಿ ಪುರಸಭೆಯವರ ಗಮನಕ್ಕೆ ತಂದಿದ್ದೇನೆ ಆದರೆ ಅವರು ತಲೆ ಕೆಡಿಸಿಕೊಂಡಿಲ್ಲ, ಈಗಲಾದರೂ ಕಾಲ ಮಿಂಚಿಲ್ಲ ಪುರಸಭೆ ಎಚ್ಚೆತ್ತುಕೊಂಡು ಪಟ್ಟಣದಲ್ಲಿ ಎಲ್ಲೆಲ್ಲಿ ಗುಂಡಿಗಳು ಬಿದ್ದಿದೆ ಅವುಗಳನ್ನ ಸಮತಟ್ಟು ಮಾಡುವ ಕೆಲಸಕ್ಕೆ ಮುಂದಾಗಬೇಕು ಇಲ್ಲದಿದ್ದ ಪಕ್ಷದಲ್ಲಿ ಪಾವಗಡದ ವಿವಿಧ ಸಂಘ ಸಂಸ್ಥೆಗಳಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು.
- ಕೆ.ವಿ. ಶ್ರೀನಿವಾಸ್ ಮಾಜಿ ಅಧ್ಯಕ್ಷರು ಎಸ್. ಎಸ್. ಕೆ. ಸಂಘ
ಸಂಬಂದಿಸಿದ ಲೋಕೋಪಯೋಗಿ ಇಲಾಖೆ, ಪುರಸಭೆ ಇಲಾಖೆ ಕಣ್ಮುಚ್ಚಿ ಕುಳಿತಿವೆ. ಜನರು ಅಪಘಾತ ಸಂಭವಿಸಿ ಅಸ್ಪತ್ರೆ ಪಾಲಾಗುತ್ತಿದ್ದು ಹಾಗೂ ಪ್ರಾಣ ಹಾನಿಯು ಸಂಭವಿಸುತ್ತಿದ್ದು ಸಂಬಂದಿಸಿದ ಇಲಾಖೆಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಕೂಡಲೇ ಸಂಬಂದಿಸಿದ ಲೋಕೋಪಯೋಗಿ ಇಲಾಖೆ, ಪುರಸಭೆ ಇಲಾಖೆ ಕೂಡಲೇ ಗಮನಹರಿಸಿ ರಸ್ತೆ ಗುಂಡಿಗಳನ್ನು ಸರಿಪಡಿಸಬೇಕಾಗಿದೆ.
- ಆಟೋ ನಾಗರಾಜ್ ಆಟೋ ಚಾಲಕರ ಸಂಘದ ಅಧ್ಯಕ್ಷ ಪಾವಗಡ