ಬೆಂಗಳೂರು: ಹಾಲಿನ ದರ ಏರಿಕೆ ಮಾಡುವ ಕುರಿತಾದ ಚರ್ಚೆ ಒತ್ತಾಯಗಳಿಗೆ ಈಗ ತೆರೆ ಬಿದ್ದಿದೆ. ಕೊನೆಗೂ ಗ್ರಾಕರ ಜೇಬಿಗೆ ಭಾರಿ ಮೊತ್ತದ ಕತ್ತರಿ ಹಾಕಿ ಪ್ರತಿ ಲೀಟರ್ಗೆ 8ರೂ. ಏರಿಕೆ ಮಾಡಿ ಅನುಮೋದಿಸಿದೆ.
ಹಾಲು ಬಳಕೆದಾರರು ಹಾಗೂ ಸಾಮಾನ್ಯ ಗ್ರಾಹಕರಿಗೆ ಸರ್ಕಾರ ಈ ಮೂಲಕ ದಸರಾ ಗಿಫ್ಟ್ ನೀಡಿದೆ.. ಹಾಲಿನ ಉತ್ಪಾದನಾ ವೆಚ್ಚ, ಪಶು ಆಹಾರ ಹಾಗೂ ದಿನನಿತ್ಯದ ನಿರ್ವಹಣಾ ವೆಚ್ಚ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಪ್ರತಿ ಲೀಟರ್ ಹಾಲಿನ ದರವನ್ನು 8 ರೂ. ಹೆಚ್ಚಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿ ಬಿಟ್ಟಿದೆ.
ಇಂದು ನಡೆದ ಮಹತ್ವದ ಸಂಪುಟ ಸಭೆಯಲ್ಲಿ ಹಾಲಿನ ದರ ಏರಿಕೆ ಬಗ್ಗೆ ತೀಂಆನಿಸಿದೆ.. ಕೆಎಂಎಫ್ ಹಾಗೂ ವಿವಿಧ ಹಾಲು ಒಕ್ಕೂಟಗಳಬೇಡಿಕೆ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ.
ಪಶುಸಂಗೋಪನೆ ಈಗ ತುಂಬಾ ದುಬಾರಿಯಂತಾಗಿದೆ. ಪಶು ಆಹಾರದ ಬೆಲೆ, ಸಾರಿಗೆ ವೆಚ್ಚ ಹಾಗೂ ನಿರ್ವಹಣಾ ಖರ್ಚುಗಳು ಗಗನಮುಖಿಯಾಗುತ್ತಾ ಸಾಗಿವೆ.. ಹಾಲಿನ ಉತ್ಪಾದನಾ ವೆಚ್ಚವೂ ಸಹ ಹೆಚ್ಚಾಗಿದ್ದು, ಹಾಲಿನ ದರ ಹೆಚ್ಚಳ ಮಾಡುವಂತೆ ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ರೈತ ಸಂಘಟನೆಗಳು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದವು. ರೈತರು ಮತ್ತು ಹಾಲು ಒಕ್ಕೂಟಗಳ ಅಹವಾಲಿನ ಸುದೀರ್ಘ ಪರಿಶೀಲನೆ ನಡೆಸಿದ ಸರ್ಕಾರ, ದರ ಏರಿಕೆಗೆ ಅಂತಿಮ ಸಮ್ಮತಿ ಸೂಚಿಸಿದೆ.
ರೈತರು ಮಳೆಯ ಸಮಸ್ಯೆ, ನಿರ್ವಹಣಾ ವೆಚ್ಚ, ಹಿಂಡಿ, ಬೂಸಾ ಬೆಲೆ ಏರಿಕೆ ಹಿನ್ನೆಲೆ ಮನವಿ ಮಾಡಿದ್ದು, 10 ರೂಪಾಯಿಯಲ್ಲಿ ರೈತನಿಗೆ 7 ರೂಪಾಯಿ ನೀಡುವಂತೆ ಮನವಿ ಮಾಡಿದ್ದರು. ಉಳಿದ 3 ರೂಪಾಯಿ ಉತ್ಪಾದಕರ ಒಕ್ಕೂಟಕ್ಕೆ ನೀಡಬೇಕೆಂದು ಪ್ರಸ್ತಾವನೆ ನೀಡಲಾಗಿತ್ತು. ಆದರೆ ಈಗ ಹೆಚ್ಚಳವಾಗಿರುವ 8 ರೂ. ಗಳಲ್ಲಿ ರೈತರ ನೆರವಿಗೆ ಸರ್ಕಾರ ಹಂಚಿಕೆ ನೀಡಲಿದೆ ಎಂಬುದು ಕಾದು ನೋಡಬೇಕಾದ ವಿಚಾರ.