ಕೊರಟಗೆರೆ: ತಾಲೂಕಿನ ಹೊಳವನಹಳ್ಳಿಯಲ್ಲಿರುವ ವಾಸವಿ ಜ್ಯೂಯಲರ್ಸ್ನಲ್ಲಿ ಗುರುವಾರ ರಾತ್ರಿ ಸಿಸಿ ಕ್ಯಾಮರಾವನ್ನು ನಿಷ್ಕ್ರಿಯಗೊಳಿಸಿ ಕಳವು ಮಾಡಿರುವ ಘಟನೆ ನಡೆದಿದೆ.
ಕಳ್ಳರು ಅತ್ಯಂತ ಚಾಣಾಕ್ಷತನದಿಂದ ರಾತ್ರಿ ಅಂಗಡಿ ಮುಚ್ಚಿದ ನಂತರ ಸಿಸಿ ಕ್ಯಾಮರಾದ ಸಂಪರ್ಕ ಕಡಿತಗೊಳಿಸಿ ಬೀಗ ಮುರಿದು ಒಳನುಗ್ಗಿ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬೆಳಿಗ್ಗೆ ಅಂಗಡಿ ತೆರೆದಾಗ ಕಳವು ಬೆಳಕಿಗೆ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಕೊರಟಗೆರೆ ಸಿಪಿಐ ಪುರುಷೋತ್ತಮ ಹಾಗೂ ಪಿಎಸ್ಐ ತೀರ್ಥೇಶ್ ಹಾಗೂ ಸಿಬ್ಬಂದಿ ತಿಪ್ಪೇಸ್ವಾಮಿ ರವಿ ಸೇರಿದಂತೆ ಪೋಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳದ ಬಂದ ನಂತರ ಮಾಹಿತಿ ಪಡೆದು ತನಿಖೆ ಮುಂದುವರಿಸಿದ್ದಾರೆ.
ಅಂಗಡಿಯಲ್ಲಿ ಯಾವ ಆಭರಣಗಳು ಹಾಗೂ ಚಿನ್ನ ಬೆಳ್ಳಿ ಬೆಲೆ ಬಾಳುವ ವಸ್ತುಗಳನ್ನು ಏನೇನು ಕಳ್ಳತನ ಆಗಿದೆ ಎಂಬುದು ತಿಳಿದುಬಂದಿಲ್ಲ.ಪೋಲೀಸ್ ಮಾಹಿತಿ ಪಡೆದು ತನಿಖೆ ಮುಂದುವರಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಅಂಗಡಿಯ ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.