ತುಮಕೂರು: ಪಟಾಕಿ ಅಂಗಡಿಗೆ ಲೈಸನ್ಸ್ ಕೊಡಿಸುವ ಸಲುವಾಗಿ ಅರ್ಜಿ ವಿಚಾರವಾಗಿ ವ್ಯಕ್ತಿ ಒಬ್ಬರಿಂದ 2000 ಲಂಚ ಪಡೆಯುವಾಗ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯ ಓ.ಎ. ʼಲೋಕಾʼ ಬಲೆಗೆ ಬಿದ್ದಿದ್ದಾರೆ.
ಬಂದ ಅರ್ಜಿಯನ್ನು ಮುಂದಿನ ಟೇಬಲ್ಗೆ ವಗಾಯಿಸುವ ಸಲುವಾಗಿ ಮುರಳಿ ಎಂಬ ಸಿಬ್ಬಂದಿ ಲೋಕಾಯುಕ್ತರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ಡಿಸಿ ಕಚೇರಿಯ ಒಎ ಮುರಳಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ತುಮಕೂರು ಲೋಕಾಯುಕ್ತ ಎಸ್ ಪಿ ಪಿ. ಮಲ್ಲೇಶ್, ಡಿ ವೈ ಎಸ್ ಪಿ ಗಳಾದ ಸಂತೋಷ್, ಮಂಜುನಾಥ್ ಗೌಡ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಶಾಂತಿನಾಥ್. ನಿರ್ಮಲ, ರಾಘವೇಂದ್ರ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.