ಮಧುಗಿರಿ: ವನ್ಯಜೀವಿಗಳ ಸಂರಕ್ಷಣೆ ಸಮಾಜದ ಆಧ್ಯ ಕರ್ತವ್ಯ ಎಂದು ಎಸಿಎಫ್ ಶ್ರೀಮತಿ ಉಮಾ ತಿಳಿಸಿದ್ದಾರೆ
ತಿಮ್ಮಲಾಪುರ ಅರಣ್ಯ ಪ್ರದೇಶ ವ್ಯಾಪ್ತಿಯ ಉಜ್ಜಯಿನಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ವನ್ಯಜೀವಿ ಸಪ್ತಾಹದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವನ್ಯಜೀವಿಗಳ ಬದುಕು ಉಳಿಯಬೇಕು ಎಂಬ ಹಿನ್ನೆಲೆಯಲ್ಲಿ ಅಕ್ಟೋಬರ್ ೨ರಿಂದ ೮ರವರೆಗೂ ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತಿದೆ ಎಂದ ಅವರು ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಿಳಿಸುವುದು ಅಗತ್ಯವಾಗಿದೆ ಇದೆ ಅಲ್ಲದೆ ಅರಣ್ಯ ಮತ್ತು ವನ್ಯಜೀವಿಗಳೊಂದಿಗೆ ಜನರ ಬಾಂಧವ್ಯವನ್ನು ಬಲಪಡಿಸುವುದು ಸಂರಕ್ಷಣಾ ಕಾರ್ಯದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ವನ್ಯಜೀವಿ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ವಿದ್ಯಾರ್ಥಿಗಳು ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರಬೇಕು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಹೊಂದಬೇಕಾಗಿದೆ ಎಂದು ತಿಳಿಸಿದರು.
ವಲಯ ಅರಣ್ಯ ಅಧಿಕಾರಿ ಸುರೇಶ್ ಮಾತನಾಡಿ ವನ್ಯಜೀವಿಗಳು ಅರಣ್ಯದ ಆಭರಣ ಇದ್ದಂತೆ ಪರಿಸರ ಸಮತೋಲನ ಕಾಪಾಡುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸಪ್ತಾಹದ ಮುಖ್ಯ ಉದ್ದೇಶ ವನ್ಯಜೀವಿಗಳ ಜೊತೆಗೆ ಅವಸಾನ ಅಂಚಿನಲ್ಲಿರುವ ಅರಣ್ಯಗಳನ್ನು ರಕ್ಷಿಸುವಲ್ಲಿ ಮಾನವನ ಪಾತ್ರದ ಬಗ್ಗೆ ಮತ್ತು ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯತೆ ಇದೆ ಎಂದರು ಈ ಸಂದರ್ಭದಲ್ಲಿ ಡಿ ಆರ್ ಎಫ್ ಶಾಲಿನಿ ಸುಮನ್ ಅರಣ್ಯ ರಕ್ಷಕರಾದ ಚಿದಾನಂದ ಎಲ್ಲಪ್ಪ ಸಿದ್ದರಾಜು ಪುರುಷ ರಾಮ್ ಹರೀಶ್ ಬಾಬು ಮಹೇಶ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಶಿಕ್ಷಕರುಗಳ ಉಪಸ್ಥಿತರಿದ್ದರು