ಶಿರಾ: ಶಿರಾ ನಗರದ ಐತಿಹಾಸಿಕ ಶ್ರೀ ವಿದ್ಯಾಗಣಪತಿ ವಿಸರ್ಜನಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಗಣಪತಿ ಮೆರವಣಿಗೆ ಅದ್ದೂರಿಯಾಗಿ ಸಾಗಿತು.
ಈ ಸಂದರ್ಭದಲ್ಲಿ ನಗರಸಭೆ ಆಶ್ರಯ ಸಮಿತಿ ಸದಸ್ಯರಾದ ನೂರುದ್ದೀನ್ ಅವರು ಶ್ರೀ ವಿದ್ಯಾಗಣಪತಿಗೆ ಪೂಜೆ ಸಲ್ಲಿಸಿ, ಭಕ್ತಿಭಾವ ಮೆರೆದರು. ವಿಚಾರವಂತರ ಪ್ರಜ್ಞಾವಂತರ ಪಡಸಾಲೆಯಲ್ಲಿ ಇದು ತುಂಬಾ ಸ್ವಾಗತಾರ್ಹವಾಗಿ ಚರ್ಚಿತವಾಗುತ್ತಿದೆ.
ಕೆಲವಾರು ವರ್ಷಗಳ ಹಿಂದೆ ತುಂಬಾ ಸೆನ್ಸಿಟೀಪ್ ಎಂಬಂತೆ ಬಿಂಬಿತವಾಗುತ್ತಿದ್ದ ಶಿರಾ ನಗರದಲ್ಲಿ ಇಂಥಾ ಭಾವೈಕ್ಯತೆಯ ಬೆಳವಣಿಗೆಗಳು ಹೆಚ್ಚು ಹೆಚ್ಚು ಕಾಣಸಿಗಲಿ, ಭ್ರಾತೃತ್ವ ಸಾರುವ ಇಂಥಾ ಘಟನೆಗಳು ಸಮಸ್ಥರಿಗೂ ಮಾದರಿಯಾಗಲಿ ಎಂಬ ಅನಿಸಿಕೆಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
ಕಾರ್ಯಕ್ರಮದಲ್ಲಿ ಗಣಪತಿ ಸೇವಾ ಸಮಿತಿಯ ಎಸ್.ಎಲ್. ಜಯರಾಮ್, ರಾಜಾ ಅಶ್ವತನಾರಾಯಣ, ಶಿವಕುಮಾರ್, ಸಿದ್ದಗಂಗಯ್ಯ ಸೇರಿದಂತೆ ನೂರುದ್ದೀನ್, ಹನೀಫ್, ಸತೀಶ್, ನಸ್ರತ್, ಜಿಯಾವುುದ್ದೀನ್, ನವಾಜ್, ಶುಕೂರ್, ಮುಕ್ತಾರ್, ಆರೀಫ್ ಸೇರಿದಂತೆ ಹಲವು ಮುಸ್ಲಿಂ ಬಾಂಧವರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ಶಿರಾ ನಗರದ ಗಣಪತಿ ವಿಸರ್ಜನಾ ಮಹೋತ್ಸವದ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಬಾಂಧವರು ಭಾಗವಹಿಸಿ ಸೌಹಾರ್ದತೆ ಹಾಗೂ pಸಹಬಾಳ್ವೆಯ ಸಂದೇಶ ಸಾರಿದ್ದು ವಿಶೇಷವಾಗಿತ್ತು.